ಕಮಾಂಡರ್ ವಿಜಯ್ 65ನೇ ಚಿತ್ರದ ನಾಯಕಿ ಯಾರು ಗೊತ್ತಾ?

ಮಂಗಳವಾರ, 5 ಜನವರಿ 2021 (16:37 IST)
ಚೆನ್ನೈ :  ಮಾಸ್ಟರ್ ಚಿತ್ರದ ಬಳಿಕ ನಟ ವಿಜಯ್ ಅವರು ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನದ ಮತ್ತು ಸನ್ ಪಿಕ್ಚರ್ಸ್ ನಿರ್ಮಿಸುವ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಚಿತ್ರದ ಅಧಿಕೃತ ಪ್ರಕಟಣೆ ಇತ್ತೀಚೆಗೆ ಬಿಡುಗಡೆಯಾಗಿದೆ. ಮತ್ತು ಮಾಸ್ಟರ್ ಚಿತ್ರದ ನಂತರ ವಿಜಯ್ ಮುಂದಿನ ಚಿತ್ರಕ್ಕೆ ಅನಿರುದ್ಧ್ ಸಂಯೋಜನೆ ಮಾಡಲಿದ್ದಾರಂತೆ. ಚಿತ್ರತಂಡ ಕೆಲವು ಹೆಸರುಗಳು ಬಹಿರಂಗಗೊಂಡಿದ್ದರೂ ವಿಜಯ್ ಅವರ ಜೊತೆ ಯಾವ ನಾಯಕಿ ನಟಿಸಲಿದ್ದಾರೆ ಎಂದು ಇನ್ನೂ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.

ಆದರೆ ಈ ನಡುವೆ ಕಮಾಂಡರ್ ವಿಜಯ್ 65ನೇ ಚಿತ್ರದ ನಾಯಕಿ ತೆಲುಗು ನಟಿ ಪೂಜಾ ಹೆಗ್ಡೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಘೋಷಣೆಯಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ