ಫೈಟರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ತಂದೆಯ ಪಾತ್ರ ಮಾಡುತ್ತಿರುವವರು ಯಾರು ಗೊತ್ತಾ?

ಸೋಮವಾರ, 14 ಡಿಸೆಂಬರ್ 2020 (10:46 IST)
ಹೈದರಾಬಾದ್ : ‘ಫೈಟರ್’ ಆಕ್ಷನ್ ಕಿಂಗ್ ಪುರಿ ಜಗನ್ನಾಥ್ ನಿರ್ದೇಶನದ ರೌಡಿ ಸ್ಟಾರ್ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಚಿತ್ರ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಹಾಗೇ ಈ ಚಿತ್ರವನ್ನು ನಿರ್ಮಾಪಕ ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ.

ಈ ಚಿತ್ರದ ಕಥೆ ಮಾಫಿಯಾ ಹಿನ್ನಲೆಯಲ್ಲಿರುವ ಕಾರಣ ಚಿತ್ರ ಪ್ರಮುಖ ಪಾತ್ರಕ್ಕಾಗಿ ಆಕ್ಷನ್ ಕಿಂಗ್ ಅರ್ಜುನ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರದಲ್ಲಿ ನಾಯಕ ವಿಜಯ್ ದೇವರಕೊಂಡ ಅವರ ತಂದೆಯ ಪಾತ್ರದಲ್ಲಿ ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ