ಮಾನ್ಸೂನ್ ರಾಗ ವೇದಿಕೆ ಮೇಲೆ ಬಂಧನ ಸಿನಿಮಾ ರಿಕ್ರಿಯೇಟ್ ಮಾಡಿದ ಡಾಲಿ-ಸುಹಾಸಿನಿ
ಈ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ರಚಿತಾ ರಾಮ್, ಸುಹಾಸಿನಿ, ಅಚ್ಯುತ್ ಕುಮಾರ್ ಸೇರಿದಂತೆ ಇಡೀ ಚಿತ್ರತಂಡವೇ ಭಾಗವಹಿಸಿತ್ತು.
ವೇದಿಕೆಯಲ್ಲಿದ್ದ ಡಾಲಿ ಧನಂಜಯ್ ಹಿರಿಯ ನಟಿ ಸುಹಾಸಿನಿ ಅವರನ್ನು ವೇದಿಕೆಗೆ ಕರೆತಂದು ಬಂಧನ ಸಿನಿಮಾವನ್ನು ರಿಕ್ರಿಯೇಟ್ ಮಾಡಿದರು. ನನಗೆ ಏನಾದರೂ ಅವಕಾಶ ಸಿಕ್ಕರೆ ಮತ್ತೆ ಹಿಂದಿನ ಕಾಲಕ್ಕೆ ಹೋಗಿ ಸುಹಾಸಿನಿ ಮೇಡಂ ಜೊತೆ ಬಂಧನ ಸಿನಿಮಾದ ವಿಷ್ಣು ಸರ್ ಪಾತ್ರ ಮಾಡ್ತೀನಿ ಎಂದು ಧನಂಜಯ್ ಹೇಳುತ್ತಿದ್ದಂತೇ ಸುಹಾಸಿನಿ ಅವರನ್ನು ವೇದಿಕೆಗೆ ಕರೆ ತರಲಾಯಿತು. ಬಳಿಕ ಧನಂಜಯ್ ಸುಹಾಸಿನಿ ಅವರಿಗಾಗಿ ಕವಿತೆಯೊಂದನ್ನು ಹೇಳಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.