ಡಾ.ವಿಷ್ಣುವರ್ಧನ್ ಜನ್ಮಜಯಂತಿ ಈ ಬಾರಿ ಸ್ಪೆಷಲ್! ಅಭಿಮಾನಿಗಳಿಂದ ವಿಶೇಷ ಸಿದ್ಧತೆ

ಸೋಮವಾರ, 12 ಸೆಪ್ಟಂಬರ್ 2022 (08:40 IST)
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮಜಯಂತಿಗೆ ಈ ಬಾರಿ ಅಭಿಮಾನಿಗಳು ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.

ಸೆಪ್ಟೆಂಬರ್ 18 ವಿಷ್ಣುದಾದ ಜನ್ಮದಿನ. ತಮ್ಮ ನೆಚ್ಚಿನ ದಾದ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳು 50 ವಿಶೇಷ ಕಟೌಟ್ ಗಳನ್ನು ಹಾಕುವ ಮೂಲಕ ಸಂಭ್ರಮಿಸಲಿದ್ದಾರೆ. ಇದಕ್ಕೆ ಕಾರಣವೂ ಇದೆ.

ಇದೇ ವರ್ಷ ಡಿಸೆಂಬರ್ 29 ಕ್ಕೆ ವಿಷ್ಣುವರ್ಧನ್ ಚಿತ್ರರಂಗಕ್ಕೆ ಬಂದು 50 ವರ್ಷ ತುಂಬುತ್ತಿದೆ. ಈ ಹಿನ್ನಲೆಯಲ್ಲಿ ಈ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ