ಬೆಳ್ಳಗೆ ದೂದ್ ಪೇಡ ಇದ್ದಂಗಿದ್ದ ನಟ ದಿಗಂತ್ ಈಗ ಹೇಗಾಗಿದ್ದಾರೆ ನೋಡಿ

Krishnaveni K

ಗುರುವಾರ, 18 ಏಪ್ರಿಲ್ 2024 (11:21 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ದೂದ್ ಪೇಡ ಎಂದೇ ಕರೆಯಿಸಿಕೊಳ್ಳುವ ಸ್ಪುರದ್ರೂಪಿ ನಟ ದಿಗಂತ್ ಈಗ ಸಖತ್ ಕರಾಬ್ ಆಗಿದ್ದಾರೆ! ಇವರೇನಾ ಅವರು ಎನ್ನುವಷ್ಟು ಬದಲಾಗಿದ್ದಾರೆ! ಅಷ್ಟಕ್ಕೂ ಅವರು ಇಷ್ಟು ಬದಲಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಡಾಲಿ ಧನಂಜಯ್ ನಾಯಕರಾಗಿರುವ ಉತ್ತರಕಾಂಡ ಸಿನಿಮಾಗೆ ದೂದ್ ಪೇಡ ದಿಗಂತ್ ಕೂಡಾ ಸೇರ್ಪಡೆಯಾಗಿದ್ದಾರೆ. ಚಿತ್ರತಂಡ ಇಂದು ದಿಗಂತ್ ಅವರ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ದಿಗಂತ್ ಗುಟ್ಕಾ ಹಾಕಿಕೊಂಡ ಸಖತ್ ರಗಡ್ ಆಗಿ ಕಾಣುತ್ತಿದ್ದಾರೆ. ಕೈಯಲ್ಲಿ ಪ್ಯಾನ್ ಪರಾಗ್ ಪ್ಯಾಕೆಟ್, ಹಳದಿಗಟ್ಟಿದ ಹಲ್ಲು ಕೆದರಿದ ಕೂದಲು, ಕುರುಚಲು ಗಡ್ಡದಲ್ಲಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ ಜನ ಇವರೇನಾ ಆ ಹ್ಯಾಂಡ್ಸಮ್ ದಿಗಂತ್ ಎನ್ನುವಷ್ಟು ಬದಲಾಗಿದ್ದಾರೆ.

ಪೋಸ್ಟರ್ ಜೊತೆಗೆ ‘ಲವ್ ಮತ್ತು ಗುಟ್ಕಾ ಜೀವಕ್ಕ್ ಅನಾಹುತ ಹೆಂಗೆ ಹಂಗಾ ದೂದ್ ಪೇಡಾ ದಿಗಂತ್ ಇಗ್ ಮಿರ್ಚಿ ‘ಮಲ್ಲಿಗಿ’ ಉತ್ತರಕಾಂಡ ಪಿಚ್ಚರದಾಗ’ ಎಂದು ಒಕ್ಕಣೆಯನ್ನೂ ಚಿತ್ರತಂಡ ಕೊಟ್ಟಿದೆ. ಆ ಮೂಲಕ ಈ ಸಿನಿಮಾದಲ್ಲಿ ದಿಗಂತ್ ಇದುವರೆಗೆ ಮಾಡಿರದಂತಹ ಖಡಕ್ ರೋಲ್ ಮಾಡುತ್ತಿದ್ದಾರೆ ಎನ್ನುವುದು ಪಕ್ಕಾ ಆಗಿದೆ.

ಉತ್ತರಕಾಂಡ ಪಕ್ಕಾ ಆಕ್ಷನ್ ಥ್ರಿಲ್ಲರ್ ಕತೆ ಹೊಂದಿರುವ ಸಿನಿಮಾ. ಈ ಸಿನಿಮಾದಲ್ಲಿ ಧನಂಜಯ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಆರ್ ಜಿ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ