ಮರುಬಿಡುಗಡೆಯಾಗಲಿರುವ ಡಾ.ರಾಜ್ ನಟನೆಯ ಭಾಗ್ಯವಂತರು ಸಿನಿಮಾ

ಮಂಗಳವಾರ, 28 ಜೂನ್ 2022 (08:40 IST)
ಬೆಂಗಳೂರು: ಅಣ್ಣಾವ್ರು, ವರನಟ ಡಾ. ರಾಜ್ ಕುಮಾರ್ ಅಭಿನಯದ ಅವಿಸ್ಮರಣೀಯ ಸಿನಿಮಾಗಳಲ್ಲಿ ಭಾಗ್ಯವಂತರು ಸಿನಿಮಾ ಕೂಡಾ ಒಂದು. ಈ ಸಿನಿಮಾ ಈಗ ಥಿಯೇಟರ್ ನಲ್ಲಿ ಮರು ಬಿಡುಗಡೆಯಾಗಲಿದೆ.

ಡಾ.ರಾಜ್ ಕುಮಾರ್-ಸರೋಜಾದೇವಿ ಪ್ರಮುಖ ಪಾತ್ರದಲ್ಲಿರುವ ಭಾಗ್ಯವಂತರು ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 48 ವರ್ಷಗಳಾಗಿವೆ.

ಈ ಹಿನ್ನಲೆಯಲ್ಲಿ ಅವರ ಅಪ್ಪಟ ಅಭಿಮಾನಿ ಮುನಿರಾಜು ಎಂ. ಎಂಬವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೊಸ ರೂಪದಲ್ಲಿ ಸಿನಿಮಾವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ