ಭಾರತ-ಐರ್ಲೆಂಡ್ ದ್ವಿತೀಯ ಟಿ20 ಪಂದ್ಯ ಇಂದು
ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ 12 ಓವರ್ ಗಳಿಗೆ ಪಂದ್ಯ ಕಡಿತ ಮಾಡಲಾಗಿತ್ತು. ಐರ್ಲೆಂಡ್ ನ ವಿಪರೀತ ಹವಾಮಾನದಲ್ಲಿ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಬೌಲಿಂಗ್ ನಲ್ಲಿ ಆವೇಶ್ ಖಾನ್ ಅಥವಾ ಉಮ್ರಾನ್ ಮಲಿಕ್ ಬದಲಿಗೆ ಅರ್ಷ್ ದೀಪ್ ಸಿಂಗ್ ಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.
ಇತ್ತ ಐರ್ಲೆಂಡ್ ಕೂಡಾ ತಾನು ತೀರಾ ದುರ್ಬಲ ಎದುರಾಳಿಯಲ್ಲ ಎಂದು ಕಳೆದ ಪಂದ್ಯದಲ್ಲೇ ಸಾಬೀತು ಪಡಿಸಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸಲು ಪ್ರಯತ್ನ ನಡೆಸಲಿದೆ. ಈ ಪಂದ್ಯ ರಾತ್ರಿ 9 ಗಂಟೆಗೆ ಆರಂಭವಾಗಲಿದೆ.