ಡ್ರಗ್ ಲಿಂಕ್ : ನಟಿ ದೀಪಿಕಾ ಪಡುಕೋಣೆಗೆ NCB ಡ್ರಿಲ್ ಶುರು
ಡ್ರಗ್ ಲಿಂಕ್ ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಎನ್ ಸಿ ಬಿ ಡ್ರಿಲ್ ಶುರುವಾಗಿದೆ.
ನಟಿಯ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರೊಂದಿಗೆ ‘ಡ್ರಗ್ ಚಾಟ್’ಗಳಲ್ಲಿ ಭಾಗಿಯಾಗಿರುವ ಬಗ್ಗೆ ದೀಪಿಕಾ ಪಡುಕೋಣೆ ವಿಚಾರಣೆ ಎದುರಿಸಲಿದ್ದಾರೆ.
ಈ ಹಿಂದೆ, ದೀಪಿಕಾ ಪಡುಕೋಣೆ ಅವರ ವಾಟ್ಸಾಪ್ ಚಾಟ್‌ಗಳು, 2017 ರಲ್ಲಿ ಕೊಕೊ ಕ್ಲಬ್‌ನಲ್ಲಿ ನಡೆದ ಪಾರ್ಟಿ ಮತ್ತು ಇತರ ಬಾಲಿವುಡ್ ತಾರೆಯರು ಸಹ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ದೀಪಿಕಾ ಮತ್ತು ಕರಿಷ್ಮಾ ಅವರನ್ನು ಎನ್‌ಸಿಬಿ ಒಟ್ಟಿಗೆ ವಿಚಾರಣೆ ನಡೆಸಲಿದೆ ಎಂದೂ ಹೇಳಲಾಗುತ್ತಿದೆ.
ಮಾದಕವಸ್ತು ಸಂಬಂಧಿತ ಚಾಟ್‌ಗಳಿಗಾಗಿನ ವಾಟ್ಸಪ್ ಗುಂಪಿನ ಅಡ್ಮಿನ್ ದೀಪಿಕಾ ಪಡುಕೋಣೆ ಆಗಿದ್ದಾರೆ ಎನ್ನಲಾಗಿದೆ.