ಡ್ರಗ್ಸ್ ಮಾಫಿಯಾ : ಸಿನಿಮಾ ನಟಿ ಸಂಜನಾ ಅರೆಸ್ಟ್

ಮಂಗಳವಾರ, 8 ಸೆಪ್ಟಂಬರ್ 2020 (22:35 IST)
ಸಿನಿಮಾ ನಟಿ ರಾಗಿಣಿ ದ್ವಿವೇದಿ ಬಂಧನದ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿಯನ್ನು ಡ್ರಗ್ಸ್ ಮಾಫಿಯಾ ಕೇಸ್ ಗೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದೆ.

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಂಧಿಸಿದ ಬಳಿಕ ನಡೆಸಿದ ವಿಚಾರಣೆಯಲ್ಲಿ ಸಂಜನಾ ಗಲ್ರಾನಿ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಹಲವು ರಾಜಕಾರಣಿಗಳ ಮಕ್ಕಳು, ಧಾರಾವಾಹಿ ನಟಿಯರು, ಸಿನಿಮಾ ನಟಿಯರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಡ್ರಗ್ಸ್ ಕೇಸ್ ಗೂ ತಮಗೂ ಸಂಬಂಧ ಇಲ್ಲ ಎಂದು ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಹರಿಹಾಯ್ದಿದ್ದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ