ಹೈದರಾಬಾದ್ : ಮೋಹನ್ ಲಾಲ್ ಅಭಿನಯದ ಕೊಲೆ ಥ್ರಿಲ್ಲರ್ ದೃಶ್ಯಂ 2 ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗುವುದು ಎಂಬುದಾಗಿ ತಿಳಿದುಬಂದಿದೆ.
ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಈ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದಾರೆ ಎಂಬುದಾಗಿ ಇಂಡಸ್ಟ್ರಿ ಟ್ರ್ಯಾಕರ್ ರಮೇಶ್ ಬಾಲಾ ಅವರು ಟ್ವೀಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಅದನ್ನು ದೃಢಪಡಿಸಿದ್ದಾರೆ.
ಇತ್ತೀಚಿನ ಮಾಹಿತಿ ಪ್ರಕಾರ ದೃಶ್ಯಂ 2 ಚಿತ್ರದ ರಿಮೇಕ್ ನಲ್ಲಿ ಬಾಲಿವುಡ್ ನಟ ಅಜಯ್ ದೇವ್ ಗನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.