ಕೊನೆಗೂ ಒಟಿಟಿ ರಿಲೀಸ್ ಗೆ ಸಿದ್ಧವಾಯ್ತು ಸಲಗ

ಭಾನುವಾರ, 19 ಜೂನ್ 2022 (08:30 IST)
ಬೆಂಗಳೂರು: ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿದ್ದ ಸೂಪರ್ ಹಿಟ್ ‘ಸಲಗ’ ಸಿನಿಮಾ ಕೊನೆಗೂ ಒಟಿಟಿಗೆ ಬರಲಿದೆ.

ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳೊಳಗೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಆದರೆ ಸಲಗ ಕಳೆದ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಿತ್ತು. ಇದಾದ ಬಳಿಕ ಬಿಡುಗಡೆಯಾದ ಎಷ್ಟೋ ಸಿನಿಮಾಗಳು ಒಟಿಟಿಗೆ ಬಂದು ಹೋದರೂ ಸಲಗ ಮಾತ್ರ ಇನ್ನೂ ಒಟಿಟಿಯಲ್ಲಿ ಬಿಡುಗಡೆಯಾಗಿರಲಿಲ್ಲ.

ಇದೀಗ ಕೊನೆಗೂ ಸಲಗ ಸಿನಿಮಾ ಸನ್ ನೆಕ್ಟ್ಸ್ ಆಪ್ ನಲ್ಲಿ ಬಿಡುಗಡೆಯಾಗುತ್ತಿದೆ.  ಇದೇ ತಿಂಗಳು ಸನ್ ನೆಕ್ಸ್ಟ್ ಆಪ್ ನಲ್ಲಿ ಸಲಗ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ