ಗರ್ಭಿಣಿ ಅಭಿಮಾನಿಯ ಬಯಕೆ ಈಡೇರಿಸಿದ ಕಿಚ್ಚ ಸುದೀಪ್

ಶನಿವಾರ, 18 ಜೂನ್ 2022 (10:10 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಮೆಚ್ಚಿನ ಅಭಿಮಾನಿಗಳ ಆಸೆಯನ್ನು ಯಾವತ್ತೂ ನಿರಾಸೆ ಮಾಡಲ್ಲ. ಅದರಲ್ಲೂ ಹೆಣ್ಣು ಮಕ್ಕಳೆಂದರೆ ವಿಶೇಷ ಗೌರವ.

ಈಗ ಸುದೀಪ್ ತಮ್ಮನ್ನು ನೋಡಬೇಕೆಂದು ಬಯಸಿದ ಗರ್ಭಿಣಿ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ. ಮನೆಗೆ ಕರೆಸಿ ಅಭಿಮಾನಿಯನ್ನು ಮಾತನಾಡಿಸಿ ಫೋಟೋ ತೆಗೆಸಿ ಖುಷಪಡಿಸಿದ್ದಾರೆ.

ಪುಟ್ಟ ಕಂದನಿಗೆ ಜನ್ಮ ನೀಡುವ ಮೊದಲು ಕಿಚ್ಚನನ್ನು ನೋಡಬೇಕೆಂಬುದು ಅಭಿಮಾನಿ ಮಹಿಳೆಯ ಬಯಕೆಯಾಗಿತ್ತು. ಅದನ್ನು ತಿಳಿದ ಕಿಚ್ಚ ತಾನೇ ಆಕೆಯನ್ನು ಮನೆಗೆ ಕರೆಸಿ ಖುಷಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ