ದುನಿಯಾ ವಿಜಯ್ ನಿರ್ದೇಶನದ ಹೊಸ ಸಿನಿಮಾಗೆ ಡಾ.ರಾಜ್ ಮನೆ ಮಗ ನಾಯಕ

ಸೋಮವಾರ, 26 ಅಕ್ಟೋಬರ್ 2020 (11:44 IST)
ಬೆಂಗಳೂರು: ಸಲಗ ಸಿನಿಮಾ ನಿರ್ದೇಶಿಸಿದ ಖುಷಿಯಲ್ಲಿರುವ ದುನಿಯಾ ವಿಜಯ್ ಈಗ ಮತ್ತೊಂದು ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ.


ಈ ಬಾರಿ ಅವರು ಕೇವಲ ನಿರ್ದೇಶನ ಮಾಡಲಿದ್ದಾರೆ. ಲವ್ ಸಬ್ಜೆಕ್ಟ್ ಇರುವ ಸಿನಿಮಾವೊಂದನ್ನು ವಿಜಿ ನಿರ್ದೇಶಿಸಲು ಹೊರಟಿದ್ದಾರೆ. ಅಂದ ಹಾಗೆ ಈ ಸಿನಿಮಾಗೆ ನಾಯಕರಾಗಿ ಡಾ. ರಾಜ್ ಮನೆ ಮಗ ಲಕ್ಕಿ ಗೋಪಾಲ್ ಆಯ್ಕೆಯಾಗಿದ್ದಾರೆ ಎಂದು ಸ್ವತಃ ವಿಜಯ್ ತಿಳಿಸಿದ್ದಾರೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ಕೂಡಾ ಸಾಥ್ ಕೊಡಲಿದ್ದಾರಂತೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ