ಪವರ್ ಸ್ಟಾರ್ ಪುನೀತ್ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
ಸಹೋದರ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಮಗಳು ವಂದಿತಾ ಸೇರಿದಂತೆ ಕುಟುಂಬಸ್ಥರು ಬೆಳಿಗ್ಗೆಯೇ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪುನೀತ್ ಮನೆಯಲ್ಲೂ ಪೂಜೆ ನಡೆಯಲಿದೆ.
ಇನ್ನು, ಇಂದು ಪುನೀತ್ ಮಾಸಿಕ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಧಿಯತ್ತ ಭೇಟಿ ನೀಡುತ್ತಿದ್ದಾರೆ.