ರಾಮ್ ಚರಣ್ ಮಗುವಿಗೆ ತೊಟ್ಟಿಲು ಮಾಡಿಸಿಕೊಟ್ಟ ಅಭಿಮಾನಿ

ಸೋಮವಾರ, 19 ಜೂನ್ 2023 (08:50 IST)
Photo Courtesy: Instagram
ಹೈದರಾಬಾದ್: ಟಾಲಿವುಡ್ ತಾರೆ ರಾಮ್ ಚರಣ್ ತೇಜ ಮತ್ತು ಉಪಾಸನಾ ಸದ್ಯದಲ್ಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಅಭಿಮಾನಿಯೊಬ್ಬರು ರಾಮ್ ಚರಣ್ ದಂಪತಿಯ ಮಗುವಿಗೆ ಕೈಯಾರೆ ತಯಾರಿಸಿದ ಸುಂದರ ತೊಟ್ಟಿಲೊಂದನ್ನು ಉಡುಗೊರೆ ನೀಡಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರು ಉಪಾಸನಾಗೆ ಹ್ಯಾಂಡ್ ಮೇಡ್ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ತೊಟ್ಟಿಲು ಹಾಗೂ ಅದನ್ನು ಕೊಟ್ಟ ಅಭಿಮಾನಿ ಜೊತೆಗೆ ವಿಡಿಯೋ ಪ್ರಕಟಿಸಿರುವ ಉಪಾಸನಾ, ರಾಮ್ ಚರಣ್ ಗಿಫ್ಟ್ ಕೊಟ್ಟ ಅಭಿಮಾನಿಗೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ