ದಳಪತಿ ವಿಜಯ್ ಮನೆ ಸಿಸಿಟಿವಿ ಕ್ಯಾಮರಾ ಮುಂದೆ ಕಣ್ಣೀರಿಟ್ಟ ಬಾಲಕಿ

ಬುಧವಾರ, 19 ಏಪ್ರಿಲ್ 2023 (06:50 IST)
Photo Courtesy: Twitter
ಚೆನ್ನೈ: ದಳಪತಿ ವಿಜಯ್ ಎಂದರೆ ಎಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಇವರ ನಡುವೆ ಶಾಲಾ ವಿದ್ಯಾರ್ಥಿನಿಯಾಗಿರುವ ಅಭಿಮಾನಿ ಬಾಲಕಿಯೊಬ್ಬಳ ವಿಡಿಯೋವೊಂದು ಈಗ ಎಲ್ಲರ ಗಮನ ಸೆಳೆದಿದೆ.

ಬಾಲಕಿ ವಿಜಯ್ ಅವರ ಚೆನ್ನೈ ನಿವಾಸದ ಗೇಟ್ ಮುಂದಿನ ಸಿಸಿಟಿವಿ ಕ್ಯಾಮರಾ ಮುಂದೆ ನಿಂತು ಕೈ ಮುಗಿದು ತನಗೆ ಒಮ್ಮೆ ನಿಮ್ಮ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಕಣ‍್ಣೀರಿಟ್ಟು ಮನವಿ ಮಾಡಿದ್ದಾಳೆ.

ಪಾನಿಪೂರಿ ವ್ಯಾಪಾರಿಯ ಮಗಳಾಗಿರುವ ತಮಿಳು ಸೆಲ್ವಿ ಎಂಬಾಕೆ ಈ ರೀತಿ ತನ್ನ ಮೆಚ್ಚಿನ ತಾರೆಯನ್ನು ನೋಡಲು ಸರ್ಕಸ್ ಮಾಡಿದ್ದಾಳೆ. ಆದರೆ ಸದ್ಯಕ್ಕೆ ವಿಜಯ್ ಲಿಯೋ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದು, ಬಾಲಕಿಯ ಮನವಿಗೆ ಸ್ಪಂದಿಸುತ್ತಾರಾ ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ