ಮತ್ತೆ ನಟಿ ಸಮಂತಾ ಋತು ಪ್ರಭು ಆರೋಗ್ಯದಲ್ಲಿ ಏರುಪೇರು

ಗುರುವಾರ, 13 ಏಪ್ರಿಲ್ 2023 (08:40 IST)
Photo Courtesy: Twitter
ಹೈದರಾಬಾದ್: ಮಾಂಸಖಂಡಗಳಿಗೆ ಬರುವ Myositis ಎನ್ನುವ ಖಾಯಿಲೆಗೊಳಗಾಗಿದ್ದ ನಟಿ ಸಮಂತಾ ಋತು ಪ್ರಭು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಸಿನಿಮಾಗೆ ಮರಳಿದ್ದರು. ಆದರೆ ಈಗ ಮತ್ತೆ ಅವರು ಅನಾರೋಗ್ಯಕ್ಕೀಡಾಗಿದ್ದಾರೆ.

ಚೇತರಿಕೆ ಬಳಿಕ ತವರಿಗೆ ಮರಳಿದ ಸಮಂತಾ ಶಾಕುಂತಲಾ ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕಾಗಿ ಹಲವೆಡೆ ಓಡಾಡಿದ್ದಲ್ಲದೆ, ಪತ್ರಿಕಾಗೋಷ್ಠಿಗಳು, ಸಂದರ್ಶನಗಳಲ್ಲೂ ಭಾಗಿಯಾಗಿದ್ದರು.

ಆದರೆ ಇದುವೇ ಅವರಿಗೆ ಮುಳುವಾಗಿದೆ. ಸತತ ಓಡಾಟದಿಂದ ಜ್ವರದಿಂದ ಬಳಲುತ್ತಿರುವ ಸಮಂತಾ ದೆಹಲಿಯಲ್ಲಿ ನಡೆದ ಶಾಕುಂತಲಾ ಪ್ರಮೋಷನ್ ನಲ್ಲಿ ಭಾಗಿಯಾಗಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ