ಟಿಆರ್‌ಪಿಯಲ್ಲಿ ಟಾಪ್‌ನಲ್ಲೇ ಇರುವಾಗಲೇ ಈ ಸೀರಿಯಲ್ ಅಂತ್ಯವಾಗಲಿದೆ
ಈ ಧಾರಾವಾಹಿಯ ಕೊನೆಯ ದಿನದ ಶೂಟ್ ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಟೋ ನೋಡಿ ಸೀರಿಯಲ್ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸೀರಿಯಲ್‌ನಲ್ಲಿ ನಾಯಕನಾಗಿ ಶಮಂತ್ ಬ್ರೋ ಗೌಡ ಹಾಗೂ ನಾಯಕಿಯಾಗಿ ಭೂಮಿಕಾ ರಮೇಶ್ ಅವರು ನಟಿಸುತ್ತಿದ್ದಾರೆ.
ಸದ್ಯ ವೈಷ್ಣವ್‌ಗೆ ಆತನ ತಾಯಿ ಕಾವೇರಿ ಎರಡನೇ ಮದುವೆ ಮಾಡಲು ಮುಂದಾಗಿದ್ದಾಳೆ. ಇನ್ನೂ ಸೀರಿಯಲ್ ಕೊನೆಯ ಶೂಟಿಂಗ್ ಎಂದು ವೈರಲ್ ಆಗುತ್ತಿರುವ ಪೋಟೋದಲ್ಲಿ ಲಕ್ಷ್ಮಿ ಹಾಗೂ ಕೀರ್ತಿ ಮದುವೆ ಹುಡುಗಿಯಾಗಿ ರೆಡಿಯಾಗಿದ್ದಾಳೆ. ಸೀರಿಯಲ್ ಅಂತ್ಯದ ಬಗ್ಗೆ ಇದುವರೆಗೂ ಸೀರಿಯಲ್ ತಂಡದಿಂದ ಮಾಹಿತಿ ಹೊರಬಿದ್ದಿಲ್ಲ.