ಕುರಕ್ಷೇತ್ರ ಎರಡನೇ ಟ್ರೈಲರ್ ಗೆ ವೀಕ್ಷಕರ ಮೆಚ್ಚುಗೆ

ಗುರುವಾರ, 25 ಜುಲೈ 2019 (09:50 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಟ್ರೈಲರ್ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಬದಲಾವಣೆಗಳೊಂದಿಗೆ ನಿನ್ನೆ ಹೊಸ ಟ್ರೈಲರ್ ಬಿಡುಗಡೆ ಮಾಡಲಾಗಿದೆ.


ಈ ಟ್ರೈಲರ್ ನಲ್ಲಿ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರದ ಝಲಕ್ ತೋರಿಸಲಾಗಿದೆ. ಜತೆಗೆ ದರ್ಶನ್ ಖಡಕ್ ಡೈಲಾಗ್, ಫೈಟಿಂಗ್ ಸೀಕ್ವೆನ್ಸ್ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಈ ಟ್ರೈಲರ್ ನೋಡಿ ವೀಕ್ಷಕರು ಫಿದಾ ಆಗಿದ್ದು, ಈ ಸಿನಿಮಾ ಕನ್ನಡ ಸಿನಿಮಾದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ, 100 ದಿನ ಪಕ್ಕಾ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಆಗಸ್ಟ್ 2 ರಂದು ಚಿತ್ರ ತೆರೆ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ