ಕಿಚ್ಚ ಸುದೀಪ್ ಪೈಲ್ವಾನ್ ಬಿಡುಗಡೆ ಮುಂದಕ್ಕೆ?! ಕಾರಣವೇನು ಗೊತ್ತಾ?

ಬುಧವಾರ, 24 ಜುಲೈ 2019 (10:15 IST)
ಬೆಂಗಳೂರು: ಕಿಚ್ಚ ಸುದೀಪ್ ಪೈಲ್ವಾನ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಒಂದು ನಿರಾಸೆಯ ಸುದ್ದಿ ಕಾದಿದೆ.


ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಭಾರೀ ಸುದ್ದಿ ಮಾಡಿರುವ ಪೈಲ್ವಾನ್ ಸಿನಿಮಾ ಆಗಸ್ಟ್ 30 ಕ್ಕೇ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗುವ ಸಾಧ್ಯತೆಯಿದೆ.

ಆಗಸ್ಟ್ ಬದಲು ಬಿಡುಗಡೆ ದಿನಾಂಕ ಸೆಪ್ಟೆಂಬರ್ 12 ಕ್ಕೆ ಮುಂದೂಡುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸಿರುವ ಬಹುನಿರೀಕ್ಷಿತ ಸಾಹೋ ಸಿನಿಮಾ ಬಿಡುಗಡೆಯಾಗುತ್ತಿರುವುದು. ಸಾಹೋ ಕೂಡಾ ಆಗಸ್ಟ್ 30 ಕ್ಕೆ ಬಿಡುಗಡೆಯಾಗುತ್ತಿದೆ. ಪೈಲ್ವಾನ್ ಕೂಡಾ ಕನ್ನಡವಲ್ಲದೆ ಹಿಂದಿ, ತಮಿಳು, ತೆಲುಗು ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಒಂದು ವೇಳೆ ಅದೇ ದಿನ ಪೈಲ್ವಾನ್ ಬಿಡುಗಡೆ ಮಾಡಿದರೆ ವೀಕ್ಷಕರ ಕೊರತೆಯಾಗಬಹುದು ಎಂಬ ಕಾರಣಕ್ಕೆ ಪೈಲ್ವಾನ್ ಬಿಡುಗಡೆ ದಿನಾಂಕ ಮುಂದೆ ಹಾಕುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ