ಪುನೀತ್ ಭಾವಚಿತ್ರ ಹಿಡಿದು ಶಬರಿಮಲೆ ಯಾತ್ರೆ ಕೈಗೊಂಡ ಫ್ಯಾನ್ಸ್

ಸೋಮವಾರ, 13 ಡಿಸೆಂಬರ್ 2021 (09:45 IST)
ಬೆಂಗಳೂರು: ಮೊನ್ನೆಯಷ್ಟೇ ಅಭಿಮಾನಿಯೊಬ್ಬ ಪುನೀತ್ ರಾಜ್ ಕುಮಾರ್ ಭಾವಚಿತ್ರ ಸಮೇತ 18 ಮೆಟ್ಟಿಲುಗಳೇರಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ವಿಡಿಯೋ ವೈರಲ್ ಆಗಿತ್ತು. ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ಪುನೀತ್ ರ ಅಪ್ಪಟ  ಅಭಿಮಾನಿಗಳ ಗುಂಪೊಂದು ಅವರ ಭಾವಚಿತ್ರಗಳನ್ನು ಹಿಡಿದು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇರುಮುಡಿ ಜೊತೆ ಪುನೀತ್ ಭಾವಚಿತ್ರವನ್ನೂ ತಲೆಮೇಲೆ ಹೊತ್ತು ನಡೆದಿದ್ದಾರೆ.

ಆ ಮೂಲಕ ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಬದುಕಿದ್ದಾಗ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದ ಪುನೀತ್ ಗೆ ನಿಧನದ ಬಳಿಕವೂ ಅಭಿಮಾನಿಗಳು ಈ ರೀತಿ ಗೌರವ ಸಮರ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ