ಜನವರಿಯಿಂದ ಕೆಜಿಎಫ್ 2 ಪ್ರಚಾರ ಶುರು
2022 ರ ಏಪ್ರಿಲ್ 14 ಕ್ಕೆ ಚಿತ್ರ ತೆರೆ ಕಾಣುವುದೆಂದು ಈಗಾಗಲೇ ಚಿತ್ರತಂಡ ಘೋಷಿಸಿದೆ. ಜನವರಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಇದ್ದು, ಈ ದಿನ ಮೇಕಿಂಗ್ ವಿಡಿಯೋವೊಂದನ್ನು ಹೊರತರಲು ಚಿತ್ರತಂಡ ತಯಾರಿ ನಡೆಸಿದೆ.
ಇನ್ನು, ಜನವರಿ ಮೂರನೇ ವಾರದ ಬಳಿಕ ಚಿತ್ರದ ಪ್ರಚಾರ ಕೆಲಸ ಶುರುವಾಗುವ ಸಾಧ್ಯತೆಯಿದೆ. ಪ್ರಶಾಂತ್ ನೀಲ್ ಆಂಡ್ ಟೀಂ ಹೈದರಾಬಾದ್, ಚೆನ್ನೈ, ಮುಂಬೈಗೂ ತೆರಳಿ ಪ್ರಚಾರ ನಡೆಸುವ ಸಾಧ್ಯತೆಯಿದೆ. ಜೊತೆಗೆ ಆನ್ ಲೈನ್ ನಲ್ಲೂ ಪ್ರಮೋಷನ್ ನಡೆಯಲಿದೆ.