ರಾಧಿಕಾ ಪಂಡಿತ್ ಅಜ್ಜಿ ಮನೆ ಗೋವಾದಲ್ಲಿದೆ. ಹೀಗಾಗಿ ಆಗಾಗ ಯಶ್ ಕುಟುಂಬ ಸಮೇತ ಇಲ್ಲಿಗೆ ಭೇಟಿ ಕೊಡುತ್ತಾರೆ. ಕೆಜಿಎಫ್ ಸಿನಿಮಾ ಬಂದ ಮೇಲೆ ಯಶ್ ಗೆ ಎಲ್ಲಿ ಹೋದರೂ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ.
ಹೀಗೆಯೇ ಈಗ ಗೋವಾ ಪ್ರವಾಸದಲ್ಲಿರುವ ಯಶ್ ನೋಡಿ ನಡುರಸ್ತೆಯಲ್ಲೇ ಅವರ ಕಾರು ಅಡ್ಡಗಟ್ಟಿದ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ಇನ್ನು, ಯಶ್ ಕೂಡಾ ಅಭಿಮಾನಿಗಳಿಗೆ ನಿರಾಸೆ ಮಾಡದೇ ಸೆಲ್ಫೀಗೆ ಪೋಸ್ ಕೊಟ್ಟು ಅಲ್ಲಿಂದ ತೆರಳಿದ್ದಾರೆ.