ಡಾಲಿ ಧನಂಜಯ್ ‘ರತ್ನನ್ ಪ್ರಪಂಚ’ ಇಂದಿನಿಂದ ಒಟಿಟಿಯಲ್ಲಿ

ಶುಕ್ರವಾರ, 22 ಅಕ್ಟೋಬರ್ 2021 (09:00 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಸಿನಿಮಾ ಇಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ.


ರತ್ನನ್ ಪ್ರಪಂಚ ಇಂದಿನಿಂದ ಅಮೆಝೋನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಸಿನಿಮಾ ಮೇಲೆಯೂ ಭಾರೀ ನಿರೀಕ್ಷೆಯಿದೆ.

ಡಾಲಿ ಧನಂಜಯ್ ಜೊತೆಗೆ ಹಿರಿಯ ನಟಿ ಉಮಾಶ್ರೀ ತಾಯಿಯ ಪಾತ್ರ ಮಾಡಿದ್ದು, ಅವರ ನೈಜ ಅಭಿನಯ ಎಲ್ಲರ ಗಮನ ಸೆಳೆಯುವಂತಿದೆ. ಹೀಗಾಗಿ ಈ ಸಿನಿಮಾ ಎಲ್ಲರಿಗೂ ಇಷ್ಟವಾಗಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ