ವಿಕ್ರಾಂತ್ ರೋಣ ಪ್ರಮೋಷನ್ ಮರೆತು ಬಿಟ್ಟರಾ ಕಿಚ್ಚ ಸುದೀಪ್? ಫ್ಯಾನ್ಸ್ ಅಸಮಾಧಾನಗೊಂಡಿದ್ದೇಕೆ?

ಗುರುವಾರ, 14 ಜುಲೈ 2022 (08:20 IST)
ಬೆಂಗಳೂರು: ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ಕೆಲವೇ ದಿನ ಬಾಕಿಯಿದೆ. ಆದರೆ ಕಿಚ್ಚ ಸುದೀಪ್ ಮೇಲೆ ಈಗ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಇದಕ್ಕೆ ಕಾರಣ ಅವರು ಬಿಗ್ ಬಾಸ್ ಪ್ರೋಮೋ ಶೂಟ್ ನಲ್ಲಿ ಭಾಗಿಯಾಗಿದ್ದು. ಬಿಗ್ ಬಾಸ್ ಪ್ರೋಮೋ ಶೂಟ್ ನಲ್ಲಿ ಭಾಗಿಯಾದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡುತ್ತಿದ್ದಂತೇ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿಯಿದೆ. ಇನ್ನೂ ಉತ್ತರ ಭಾರತದಲ್ಲಿ ಸರಿಯಾಗಿ ಪ್ರಚಾರವನ್ನೇ ಮಾಡಿಲ್ಲ. ಈಗ ನಿಮ್ಮ ಗಮನ ಕೇವಲ ವಿಕ್ರಾಂತ್ ರೋಣ ಕಡೆಗಿರಲಿ. ಈ ಸಮಯದಲ್ಲಿ ಬಿಗ್ ಬಾಸ್ ಶೋ ಬೇಕಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳನ್ನು ತಲುಪುವ ಮೂಲಕ ವಿಕ್ರಾಂತ್ ರೋಣ ಪ್ರಚಾರವನ್ನು ಇನ್ನಷ್ಟು ಬಿರುಸುಗೊಳಿಸಬೇಕಿತ್ತು ಎಂದು ಅಭಿಮಾನಿಗಳು ಆಕ್ಷೇಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ