ರವಿಚಂದ್ರನ್ ಪುತ್ರ ಮನೋರಂಜನ್ ಗೆ ಕೂಡಿ ಬಂತು ಕಂಕಣ ಭಾಗ್ಯ

ಗುರುವಾರ, 14 ಜುಲೈ 2022 (08:10 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಗೆ ಕೊನೆಗೂ ಕಂಕಣ ಭಾಗ್ಯ ಬಂದಿದೆ. ಕ್ರೇಜಿಸ್ಟಾರ್ ಮನೆಗೆ ಸೊಸೆ ಆಗಮನವಾಗುತ್ತಿದೆ.

ಮನೋರಂಜನ್ ಮದುವೆಯಾಗುತ್ತಿರುವ ಹುಡುಗಿ ಸಂಗೀತಾ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 23 ರಂದು ಮನೋರಂಜನ್ ಮದುವೆ ಬೆಂಗಳೂರಿನಲ್ಲಿ ನಡೆಯಲಿದೆ.

ಮನೋರಂಜನ್ ಮದುವೆ ಬಗ್ಗೆ ಕೆಲವು ಸಮಯದಿಂದ ಸುದ್ದಿಗಳು ಬರುತ್ತಲೇ ಇದ್ದವು. ಮೂರು ವರ್ಷಗಳ ಹಿಂದೆ ರವಿಚಂದ್ರನ್ ತಮ್ಮ ಮಗಳಿಗೆ ಮದುವೆ ಮಾಡಿದ್ದರು. ಇದಾದ ಬಳಿಕ ಮನೋರಂಜನ್ ಗೆ ಮದುವೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ ಕೊನೆಗೂ ರವಿಚಂದ್ರನ್ ಮನೆಗೆ ಸೊಸೆ ಬರಮಾಡಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ