ಲಕ್ಕಿ ಮ್ಯಾನ್ ಆಗಿ ಆಗಸ್ಟ್ ನಲ್ಲಿ ತೆರೆ ಮೇಲೆ ಬರಲಿದ್ದಾರೆ ಪುನೀತ್ ರಾಜ್ ಕುಮಾರ್
ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಒಂದು ಹಾಡು ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಪಾತ್ರಕ್ಕೆ ಅವರೇ ಡಬ್ ಮಾಡಿದ್ದರು. ಇದಕ್ಕೂ ಮೊದಲು ಅವರು ನಾಯಕರಾಗಿ ಕೊನೆಯ ಬಾರಿ ನಟಿಸಿದ್ದ ಜೇಮ್ಸ್ ಸಿನಿಮಾದಲ್ಲಿ ಅವರದ್ದೇ ಧ್ವನಿ ಇರಲಿಲ್ಲ ಎಂದು ಅಭಿಮಾನಿಗಳಿಗೆ ಬೇಸರವಿತ್ತು. ಆದರೆ ಲಕ್ಕಿ ಮ್ಯಾನ್ ನಲ್ಲಿ ಪುನೀತ್ ಪಾತ್ರಕ್ಕೆ ಅವರದ್ದೇ ಧ್ವನಿಯಿರಲಿದೆ.
ಈ ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭುದೇವ ಜೊತೆಗೆ ಪುನೀತ್ ಹೆಜ್ಜೆ ಹಾಕಿರುವ ಪವರ್ ಫುಲ್ ಡ್ಯಾನ್ಸ್ ಸ್ಟೆಪ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.