ತಂದೆಯೇ 'ಫ್ಯಾಮಿಲಿ ಸ್ಟಾರ್‌', 'ನನ್ನ ಹೀರೋ': ಅಪ್ಪನನ್ನು ಕೊಂಡಾಡಿದ ವಿಜಯ್ ದೇವರಕೊಂಡ

Sampriya

ಶುಕ್ರವಾರ, 5 ಏಪ್ರಿಲ್ 2024 (12:24 IST)
Photo Courtesy X
ಆಂಧ್ರಪ್ರದೇಶ: ತೆಲುಗು ನಟ ವಿಜಯ್ ದೇವರಕೊಂಡ ಅಭಿನಯದ ಬಹನಿರೀಕ್ಷಿತ 'ಫ್ಯಾಮಿಲಿ ಸ್ಟಾರ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಇನ್ನೂ ಚಿತ್ರ ಬಿಡುಗಡೆಗೂ ಮುನ್ನಾ ನಟ ವಿಜಯ್ ತನ್ನ ಫ್ಯಾಮಿಲಿ ಸ್ಟಾರ್‌ನ ಬಗ್ಗೆ ರೀಲ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಅವರು ತಂದೆ ಗೋವಾರ್ಧನ್ ಬಗ್ಗೆ ಬಣ್ಣಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್ನೂ ರೀಲ್‌ನಲ್ಲಿ ತಂದೆ ಗೋವರ್ಧನ್ ಅವರ ಯೌವ್ವನದ ಫೋಟೋದೊಂದಿಗೆ, ಮಕ್ಕಳ ಜತೆ ಕಳೆದ ಸಂತಸದ ಕ್ಷಣಗಳನ್ನು ಎಡಿಟ್ ಮಾಡಿ ನೀವೇ ನನ್ನ ಪ್ಯಾಮಿಲಿ ಸ್ಟಾರ್, ನೀವೇ ನನ್ನ ಹೀರೋ ಎಂದಿದ್ದಾರೆ.

"ನನ್ನ ಫ್ಯಾಮಿಲಿ ಸ್ಟಾರ್...ನೀವು ಇಲ್ಲದೆ ನಾನಿಲ್ಲ. ಮಗುವಿನಂತೆ ನನ್ನ ಮೊದಲ ಹೆಜ್ಜೆಗಳಿಂದ, ಇಂದು ನಾನು ಇಡುವ ಪ್ರತಿಯೊಂದು ಹೆಜ್ಜೆಗೂ, ನೀವು ನನ್ನ ಹಿಂದೆ ನಿಂತು ನನ್ನನ್ನು ಬೆಳೆಸಿದ್ದೀರಿ. ನೀನು ಪಟ್ಟ ಕಷ್ಟದಿಂದ ನಾನಿಂದೂ ಕಷ್ಟ ಪಡಬೇಕಾಗಿಲ್ಲ, ನಿಮ್ಮ ಖುಷಿಯನ್ನು ತ್ಯಾಗ ಮಾಡಿದ್ದರಿಂದ ನಾವು ಖುಷಿಯಾಗಿದ್ದೇನೆ. ನೀವೇ ನನ್ನ ಮೊದಲ ಫ್ರೆಂಡ್,  ನೀವೇ ನನ್ನ ಮೊದಲ ಹೀರೋ, ನೀವೇ ನನ್ನ ಶಕ್ತಿ ಎಂದು ಅಪ್ಪನ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ.

ನಮ್ಮ ಜೀವನದಲ್ಲಿ ಸ್ಟಾರ್‌ಗಳನ್ನು ಆಚರಿಸಲು  ಫ್ಯಾಮಿಲಿ ಸ್ಟಾರ್ ಸಿನಿಮಾವನ್ನು ಮಾಡಿದ್ದೇವೆ.  ನಾನು ಈ ಸಿನಿಮಾವನ್ನು ತಮ್ಮ ಕುಟುಂಬಕ್ಕಾಗಿ ಹೋರಾಡುವ ಪ್ರತಿಯೊಬ್ಬ ಪುರುಷ/ಮಹಿಳೆ/ಹುಡುಗ/ಹುಡುಗಿಗೆ ಅರ್ಪಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.  ಗೀತ ಗೋವಿಂದಂ ಹಿಟ್ ಸಿನಿಮಾ ನೀಡಿದ  ಪರಶುರಾಮ್ ಪೆಟ್ಲಾ ಅವರು ಫ್ಯಾಮಿಲಿ ಸ್ಟಾರ್ ನಿರ್ದೇಶನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ