ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಲೇ ಇದೆ.
ಆದರೆ ಇಬ್ಬರೂ ಇದನ್ನು ಎಲ್ಲೂ ಕನ್ ಫರ್ಮ್ ಮಾಡಿಲ್ಲ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ತಮಗೆ ಜೀವನದಲ್ಲಿ ಎಲ್ಲರಿಗಿಂತ ಹೆಚ್ಚು ಬೆಂಬಲವಾಗಿ ನಿಂತಿದ್ದು ವಿಜಯ್ ದೇವರಕೊಂಡ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ತಮ್ಮ ಮತ್ತು ವಿಜಯ್ ನಡುವಿನ ಆಪ್ತತೆ ಬಗ್ಗೆ ಸುಳಿವು ನೀಡಿದ್ದಾರೆ.
ವಿಜಯ್ ಬಗ್ಗೆ ರಶ್ಮಿಕಾ ಹೇಳಿದ್ದೇನು?
ವಿಜು ಮತ್ತು ನಾನು ಒಟ್ಟಿಗೇ ವೃತ್ತಿ ಜೀವನದಲ್ಲಿ ಬೆಳವಣಿಗೆ ಹೊಂದಿದವರು. ನಾನು ಈಗ ಜೀವನದಲ್ಲಿ ಏನೇ ಮಾಡಿದರೂ ಅದರಲ್ಲಿ ಆತನ ಪಾಲೂ ಇದೆ. ನಾನು ಏನೇ ಮಾಡುವುದಿದ್ದರೂ ವಿಜಯ್ ಸಲಹೆ ಕೇಳುತ್ತೇನೆ. ಆತ ಎಲ್ಲದಕ್ಕೂ ಎಸ್ ಎಂದು ತಲೆಯಾಡಿಸುವ ವ್ಯಕ್ತಿಯಲ್ಲ. ಯಾವುದು ಒಳ್ಳೆಯದು ಯಾವುದು ಒಳ್ಳೆಯದಲ್ಲ ಎಂದು ಇದ್ದದ್ದನ್ನು ಇದ್ದ ಹಾಗೆ ಹೇಳುವ ವ್ಯಕ್ತಿ. ವೈಯಕ್ತಿಕವಾಗಿ ಆತ ನನಗೆ ತುಂಬಾ ಸಪೋರ್ಟ್ ಮಾಡಿದ್ದಾನೆ. ಜೀವನದಲ್ಲಿ ಯಾರಿಂದಲೂ ನನಗೆ ಅಷ್ಟೊಂದು ಸಪೋರ್ಟ್ ಸಿಕ್ಕಿಲ್ಲ. ಹೀಗಾಗಿ ನಾನು ಯಾವತ್ತೂ ಗೌರವಿಸುವ ವ್ಯಕ್ತಿ ಎಂದು ವಿಜಯ್ ಗುಣಗಾನ ಮಾಡಿದ್ದಾರೆ.
2018 ರಲ್ಲಿ ಇಬ್ಬರೂ ಗೀತ ಗೋವಿಂದಂ ಸಿನಿಮಾ ಮಾಡುವಾಗ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಅದಾದ ಬಳಿಕ ಎಲ್ಲೂ ಇಬ್ಬರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ಬಾಯ್ಬಿಟ್ಟಿಲ್ಲ. ಆದರೆ ಇಬ್ಬರ ವರ್ತನೆ ಪ್ರೀತಿಯನ್ನು ಸಾರಿ ಹೇಳುತ್ತದೆ. ಇತ್ತೀಚೆಗೆ ಇಬ್ಬರೂ ಇದೇ ತಿಂಗಳು ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ವಿಜಯ್ ಇದನ್ನು ಅಲ್ಲಗಳೆದಿದ್ದರು.