ಉಪ್ಪೇನಾ ಚಿತ್ರದಲ್ಲಿ ವಿಜಯ್ ಸೇತುಪತಿಯ ಈ ನಟನೆಗೆ ಫಿದಾ ಆದ ತೆಲುಗು ಅಭಿಮಾನಿ
ಬುಧವಾರ, 17 ಫೆಬ್ರವರಿ 2021 (10:15 IST)
ಚೆನ್ನೈ : ನಟ ವಿಜಯ್ ಸೇತುಪತಿ ಕಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರು. ಅವರು ಮಾಸ್ಟರ್ ಹಾಗೂ ಉಪ್ಪೇನಾ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಇದೀಗ ಉಪ್ಪೇನಾ ಚಿತ್ರದಲ್ಲಿ ಅವರ ನಟನೆಯನ್ನು ಕಂಡು ತೆಲುಗು ಅಭಿಮಾನಿಯೊಬ್ಬರು ಅಭಿನಂದಿಸಿದ್ದಾರೆ.
ವಿಜಯ್ ಸೇತುಪತಿ ಅವರ ಉಪ್ಪೇನಾ ಚಿತ್ರ ನೋಡಿದ ಅಭಿಮಾನಿ, ವಿಜಯ್ ಸೇತುಪತಿ ಕ್ಲೈಮ್ಯಾಕ್ಸ್ ನಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲದೇ ತನ್ನ ಕಣ್ಣುಗಳಿಂದಲೇ ನಟನೆ ಮಾಡಿದ್ದಾರೆ. ಅವರು ಒಬ್ಬ ಶ್ರೇಷ್ಠ ನಟ ಎಂದು ಅಭಿನಂದಿಸಿದ್ದಾರೆ. ಆ ಮೂಲಕ ವಿಜಯ್ ಸೇತುಪತಿ ಸಿಂಪಲ್ ಎಕ್ಸಪ್ರೆಶನ್ ಗಳೊಂದಿಗೆ ಪರದೆಯ ಮೇಲೆ ಪ್ರಭಾವ ಬೀರುವ ನಟ ಎಂಬ ಮೆಚ್ಚುಗೆ ಪಾತ್ರರಾಗಿದ್ದಾರೆ.