ಈ ವಾರ ಬಿಡುಗಡೆಯಾಗುತ್ತಿರುವ ಹೊಸ ಸಿನಿಮಾ

ಶುಕ್ರವಾರ, 27 ನವೆಂಬರ್ 2020 (08:51 IST)
ಬೆಂಗಳೂರು: ಶುಕ್ರವಾರ ಬಂತೆಂದರೆ ಗಾಂಧಿನಗರದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಕಾಲವಿತ್ತು. ಆದರೆ ಕೊರೋನಾ ಬಂದ ಮೇಲೆ ಅದೆಲ್ಲಾ ನಿಂತು ಹೋಗಿದೆ.


ಕಳೆದ ವಾರ ಆಕ್ಟ್ 1978 ಸಿನಿಮಾ ಬಿಡುಗಡೆಯಾಗಿತ್ತು. ಈ ವಾರ ಅರಿಷಡ್ವರ್ಗ, ಗಡಿಯಾರ ಎಂಬ ಎರಡು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅರಿಷಡ್ವರ್ಗ ಸಿನಿಮಾದಲ್ಲಿ ಮಾನ್ವಿತಾ ಕಾಮತ್, ಸಂಯುಕ್ತಾ ಹೊರನಾಡು, ಸುಧಾ ಬೆಳವಾಡಿ ಮುಂತಾದವರ ತಾರಾಗಣವಿದೆ.

ಇನ್ನು, ಗಡಿಯಾರ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ಶೀತಲ್ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ, ಮನೆ ನಂ. 13 ಎಂಬ ಸಿನಿಮಾ ನಿನ್ನೆ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ