ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ಬ್ಯಾನ್ ಜಗ್ಗೇಶ್ ಅಭಿಯಾನ

ಗುರುವಾರ, 26 ನವೆಂಬರ್ 2020 (11:05 IST)
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ವಿರುದ್ದ ಧ್ವನಿಯೆತ್ತಿದ್ದಕ್ಕೆ ನವರಸನಾಯಕ ಜಗ್ಗೇಶ್ ವಿರುದ್ಧ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.


ಪ್ಯಾನ್ ಇಂಡಿಯಾದಿಂದ ಕನ್ನಡ ಚಿತ್ರರಂಗ ಉದ್ಧಾರವಾಗಲ್ಲ ಎಂದು ಜಗ್ಗೇಶ್ ಮಾಧ‍್ಯಮಗಳಿಗೆ ನೀಡಿರುವ ಹಿನ್ನಲೆಯಲ್ಲಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಜಗ್ಗೇಶ್ ವಿರುದ್ಧ ‘ಬ್ಯಾನ್ ಜಗ್ಗೇಶ್’ ಅಭಿಯಾನವನ್ನೇ ಆರಂಭಿಸಿದ್ದಾರೆ. ಒಬ್ರು ಬೆಳಿತಾರೆ ಎಂದರೆ ಹೊಟ್ಟೆ ಉರಿದುಕೊಳ್ಳುವ ಸೀನಿಯರ್ ನಟ. ಕನ್ನಡ ಚಿತ್ರರಂಗ ನಿಮ್ಮಿಂದ ಉದ್ಧಾರವಂತೂ ಆಗಿಲ್ಲ, ಹಾಳು ಮಾಡಬೇಡಿ ಎಂದು ಯಶ್ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ