ಕೊರೋನಾದಿಂದಾಗಿ ಮದುವೆ ಮುಂದೂಡಿರುವ ಕ್ರಿಕೆಟಿಗರು!

ಶನಿವಾರ, 4 ಏಪ್ರಿಲ್ 2020 (09:54 IST)
ಸಿಡ್ನಿ: ಕೊರೋನಾವೈರಸ್ ಆಸ್ಟ್ರೇಲಿಯಾವನ್ನೂ ಲಾಕ್ ಡೌನ್ ಗೆ ದೂಡಿದೆ. ಈ ಹಿನ್ನಲೆಯಲ್ಲಿ ಅಲ್ಲಿಯೂ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರ ಪರಿಣಾಮ ಈಗ ಆಸ್ಟ್ರೇಲಿಯಾದ ಕೆಲವು ಕ್ರಿಕೆಟಿಗರು ತಮ್ಮ ಮದುವೆಯನ್ನೇ ಮುಂದೂಡಿದ್ದಾರೆ.


ಆಸ್ಟ್ರೇಲಿಯಾ ಕ್ರಿಕೆಟಿಗರಾದ ಆಡಂ ಜಂಪಾ, ಲಿಜೆಲ್ ಲೀ, ಜ್ಯಾಕ್ಸನ್ ಬರ್ಡ್, ಡಿ ಆರ್ಚಿ ಮುಂತಾದ ಕ್ರಿಕೆಟಿಗರು ಎಲ್ಲಾ ಸರಿ ಹೋಗಿದ್ದರೆ ಈಗಾಗಲೇ ತಮ್ಮ ಪ್ರಿಯತಮೆ ಜತೆ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.

ಆದರೆ ಕೊರೋನಾದಿಂದಾಗಿ ಈ ಎಲ್ಲಾ ಕ್ರಿಕೆಟಿಗರೂ ತಮ್ಮ ಮದುವೆಯನ್ನು ಮುಂದೂಡಿದ್ದು, ಪರಿಸ್ಥಿತಿ ತಿಳಿಯಾಗಲು ಕಾಯುತ್ತಿದ್ದಾರೆ. ಅಂತೂ ಕೊರೋನಾ ಯಾವ ಮಟ್ಟಿಗೆ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ತಿಳಿದುಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ