ನವದೆಹಲಿ: ಕೊರೋನಾವೈರಸ್ ಇಷ್ಟು ದಿನ ಸೋಂಕಿತರ ಸ್ಪರ್ಶದಿಂದ, ಅವರ ಜೊಲ್ಲು, ಸೀನು ತಾಕಿದರೆ ಮಾತ್ರ ಹರಡುತ್ತದೆ ಎಂಬ ನಂಬಿಕೆಯಿತ್ತು. ಆದರೆ ವಿಜ್ಞಾನಿಗಳ ಪ್ರಕಾರ ಸೋಂಕಿತರ ಜತೆ ಮಾತನಾಡುವುದರಿಂದಲೂ, ಉಸಿರು ಸೋಕುವುದರಿಂದಲೂ ಹರಡುತ್ತದೆ ಎನ್ನಲಾಗಿದೆ.
ಇದುವರೆಗೆ ಗಾಳಿ ಮೂಲಕ ರೋಗ ಹರಡುವುದಿಲ್ಲ ಎಂದು ನೆಮ್ಮದಿಯಾಗಿದ್ದವರಿಗೆ ಅಮೆರಿಕಾ ವಿಜ್ಞಾನಿಗಳು ಇಂತಹದ್ದೊಂದು ಶಾಕ್ ನೀಡಿದ್ದಾರೆ. ಇದರಿಂದಾಗಿಯೇ ವೈರಸ್ ಇಷ್ಟು ವೇಗವಾಗಿ ಹರಡುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದಾಗಿ ಸಂಪೂರ್ಣ ಲಾಕ್ ಡೌನ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಏಕಾಂತವಾಗಿರುವುದು ಈ ರೋಗದಿಂದ ರಕ್ಷಣೆ ಪಡೆಯಲು ಸೂಕ್ತವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.