ಸಿಂಗಾಪುರ್ ನಲ್ಲಿ ಮತ್ತೆ ಒಂದು ತಿಂಗಳು ಲಾಕ್ ಡೌನ್: ನಮಗೂ ಇದೇ ಗತಿಯೇ?

ಶನಿವಾರ, 4 ಏಪ್ರಿಲ್ 2020 (09:44 IST)
ನವದೆಹಲಿ: ಕೊರೋನಾ ಹರಡುವಿಕೆ ತಡೆಯಲು ಸಿಂಗಾಪುರ್ ನಲ್ಲಿ ಮತ್ತೆ ಒಂದು ತಿಂಗಳ ಲಾಕ್ ಡೌನ್ ಮಾಡಲು ಅಲ್ಲಿನ ಪ್ರಧಾನಿ ಘೋಷಣೆ ಮಾಡಿದ್ದಾರೆ. ಇದೀಗ ಭಾರತದಲ್ಲೂ ಇದೇ ಗತಿಯಾಗಬಹುದೇ ಎಂಬ ಆತಂಕ ಜನರಿಗೆ ಎದುರಾಗಿದೆ.


ಒಂದು ವಾರ ಲಾಕ್ ಡೌನ್ ಹಿಂಪಡೆದಿದ್ದಾಗ ಒಂದು ಸಾವಿರ ಮಂದಿಗೆ ಹೊಸದಾಗಿ ಸೋಂಕು ತಗುಲಿತ್ತು. ಸೋಂಕಿತರ ಸಂಖ್ಯೆ ಭಾರೀ ಹೆಚ್ಚಳವಾದ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿಸಲು ಸಿಂಗಾಪುರ ಸರ್ಕಾರ ನಿರ್ಧರಿಸಿದೆ.

ಇದೀಗ ಭಾರತದ ಸ್ಥಿತಿಯೂ ಇದಕ್ಕಿಂತ ಭಿನ್ನಾವೇನೂ ಅಲ್ಲ. ಜನರು ಮಾತು ಕೇಳುತ್ತಿಲ್ಲ. ಇದರಿಂದಾಗಿ ಲಾಕ್ ಡೌನ್ ಇದ್ದಾಗಲೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗೇ ಮುಂದುವರಿದರೆ ಲಾಕ್ ಡೌನ್ ಅವಧಿ ಮುಗಿದ ಬಳಿಕ ಪರಿಸ್ಥಿತಿ ಏನಾಗಬಹುದೆಂದು ಊಹಿಸಿ. ಇದಕ್ಕಾಗಿಯೇ ಲಾಕ್ ಡೌನ್ ಬೇಗ ಮುಗಿದು ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ನಮ್ಮ ಕೈಯಲ್ಲೇ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ