ಯಕ್ಷಗಾನ ವೇಷ ತೊಟ್ಟ ಈ ಸ್ಯಾಂಡಲ್ ವುಡ್ ಹೀರೋ ಯಾರೆಂದು ಪತ್ತೆ ಮಾಡಿ ನೋಡೋಣ

Krishnaveni K

ಮಂಗಳವಾರ, 9 ಏಪ್ರಿಲ್ 2024 (13:25 IST)
Photo Courtesy: Twitter
ಬೆಂಗಳೂರು: ಯುಗಾದಿ ಹಬ್ಬದ ನಿಮಿತ್ತ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳ ಪೋಸ್ಟರ್, ಅಪ್ ಡೇಟ್ ಇಂದು ಹೊರಬೀಳುತ್ತಿದೆ.

ಈ ಪೈಕಿ ಒಂದು ಪೋಸ್ಟರ್ ಅಂತೂ ಎಲ್ಲರ ಗಮನ ಸೆಳೆಯುತ್ತಿದೆ. ಈ ಪೋಸ್ಟರ್ ನಲ್ಲಿ ಹೀರೋ ಯಕ್ಷಗಾನ ವೇಷ ತೊಟ್ಟು ಭೀಭತ್ಸ ರೂಪದಲ್ಲಿ ಪೋಸ್ ಕೊಟ್ಟಿದ್ದಾರೆ. ಚಿತ್ರತಂಡ ಇಂತಹದ್ದೊಂದು ಪೋಸ್ಟ್ ಹೊರಬಿಟ್ಟು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹಾಗಿದ್ದರೆ ಈ ಪೋಸ್ಟರ್ ಯಾವ ಸಿನಿಮಾದ್ದು? ಈ ಹೀರೋ ಯಾರು ಎಂದು ತಿಳಿದುಕೊಳ್ಳಬೇಕಾ?

ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಕರಾವಳಿ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ಪ್ರಜ್ವಲ್ ಯಕ್ಷಗಾನ ವೇಷ ತೊಟ್ಟುಕೊಂಡಿದ್ದಾರೆ. ಅವರ ಈ ಪೋಸ್ಟರ್ ನೋಡಿ ಅನೇಕರಿಗೆ ಇದು ಅವರೇನಾ ಎಂದು ಗುರುತಿಸಲೂ ಕಷ್ಟವಾಗುತ್ತಿದೆ.

ಕರಾವಳಿಯ ಕಲೆ ಯಕ್ಷಗಾನದ ವೇಷ ಎಂದರೆ ಹಾಗೆಯೇ. ನಿಜವಾದ ಕಲಾವಿದ ಯಾರು ಎಂದು ಗುರುತಿಸಲು ಕಷ್ಟ. ಈ ಪೋಸ್ಟರ್ ನಲ್ಲಿಯೂ ಪ್ರಜ್ವಲ್ ರನ್ನು ಅವರೇ ಎಂದು ನಂಬಲು ಕಷ್ಟವಾಗುತ್ತಿದೆ. ಆದರೆ ಪ್ರಜ್ವಲ್ ಈ ಹೊಸ ಅವತಾರ ಎಲ್ಲರಿಗೂ ಇಷ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ