ಯಕ್ಷಗಾನ ವೇದಿಕೆಯಲ್ಲಿ ಹನುಮಂತನ ಪ್ರತಾಪ

geetha

ಭಾನುವಾರ, 18 ಫೆಬ್ರವರಿ 2024 (19:00 IST)
ಕುಮಟಾ :   ಪರಂಪರಾನುಗತ ಪ್ರಾಚೀನ ಕಲೆಗೆ ಆಧನಿಕ ತಂತ್ರಜ್ಞಾನದ ಸ್ಪರ್ಶ ನೀಡಿರುವ ಪ್ರಯೋಗಕ್ಕೆ ಪ್ರೇಕ್ಷಕರು ಶಭಾಷ್‌ ಎಂದಿದ್ದಾರೆ. ಯಕ್ಷಗಾನದ ಆಟವೊಂದರಲ್ಲಿ ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತು ತರುವ ದೃಶ್ಯವನ್ನು ಮರು ನಿರ್ಮಿಮಿಸಿರುವ ತಂತ್ರಜ್ಞಾನ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಕಲಾಗಂಗೋತ್ರಿ ತಂಡ ಆಡಿದ್ದ ಸಂಜೀವಿನಿ ಎಂಬ ಆಟದಲ್ಲಿ ಈ ಪ್ರಯೋಗವನ್ನು ಮಾಡಲಾಗಿದೆ. ಯಕ್ಷಗಾನ ವೇದಿಕೆಯ ಮೇಲೆ ನೂರಾರು ಅಡಿ ಎತ್ತರದಿಂದ ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತು ತರುವ ದೃಶ್ಯವು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

 ಕಲಾಗಂಗೊತ್ರಿ ತಂಡವು ಈ ಹಿಂದೆ ವೈಶಂಪಾಯನ ಸರೋವರದಿಂದ ದುರ್ಯೋಧನ ಎದ್ದು ಬರುವ ದೃಶ್ಯ,  ಕಾಗೆಯ ಮೇಲೆ ಕುಳಿತು ಶನೈಶ್ಚರ ಆಗಮಿಸುವ ದೃಶ್ಯ ಹಾಗೂ ಸಮುದ್ರಮಥನದ ದೃಶ್ಯಗಳಲ್ಲೂ ಈ ರೀತಿಯ ಪ್ರಯೋಗಗಳನ್ನು ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ