ನಾವಿರೋದು ಇಟೆಲಿಯಲ್ಲಿ ಅಲ್ಲ! ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪ್ರಕಟಿಸಿದ ರಾಧಿಕಾ

ಶುಕ್ರವಾರ, 22 ಜುಲೈ 2022 (17:32 IST)
ಬೆಂಗಳೂರು: ರಾಕಿಂಗ್ ‍ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇದೀಗ ಹಾಲಿಡೇ ಮೂಡ್ ನಲ್ಲಿದ್ದಾರೆ.

ಯಶ್-ರಾಧಿಕಾ ಇಟೆಲಿ ಪ್ರವಾಸದಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ರಾಧಿಕಾ ಇಂದು ಮತ್ತೊಮ್ಮೆ ಯಶ್ ಜೊತೆಗಿನ ರೊಮ್ಯಾಂಟಿಕ್ ಕ್ಷಣಗಳ ಫೋಟೋ ಹಂಚಿಕೊಂಡಿದ್ದು ನಾವಿರೋದು ಇಟೆಲಿಯಲ್ಲಿ ಅಲ್ಲ ಎಂದಿದ್ದಾರೆ.

ಜೊತೆಗೆ ನಾವಿರೋದು ಯಾವ ತಾಣದಲ್ಲಿ ಎಂದು ಗೆಸ್ ಮಾಡಲು ನೆಟ್ಟಿಗರಿಗೇ ಬಿಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದರೆ ರಾಕಿಂಗ್ ಜೋಡಿ ಗ್ರೀಸ್ ನಲ್ಲಿರುವಂತೆ ತೋರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ