Geetha Shiva Rajkumar: ಶಿವರಾಜ್ ಕುಮಾರ್ ಬಳಿಕ ಈಗ ಪತ್ನಿ ಗೀತಾಗೆ ಶಸ್ತ್ರಚಿಕಿತ್ಸೆ: ಏನಾಗಿದೆ ಶಿವಣ್ಣನ ಪತ್ನಿಗೆ ಇಲ್ಲಿದೆ ಡಿಟೈಲ್ಸ್

Krishnaveni K

ಬುಧವಾರ, 26 ಮಾರ್ಚ್ 2025 (09:49 IST)
ಬೆಂಗಳೂರು: ನಟ ಶಿವರಾಜ್ ಕುಮಾರ್ ಬಳಿಕ ಈಗ ಪತ್ನಿ ಗೀತಾ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಅವರಿಗೆ ಏನು ಆರೋಗ್ಯ ಸಮಸ್ಯೆಯಾಗಿತ್ತು ಇಲ್ಲಿದೆ ಮಾಹಿತಿ.
 

ನಟ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಅಮೆರಿಕಾದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದಿದ್ದರು. ಇದಾದ ಬಳಿಕ ಅವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಾರೆ.

ಇದರ ನಡುವೆಯೇ ಈಗ ಗೀತಾ ಶಿವರಾಜ್ ಕುಮಾರ್ ಗೂ ಶಸ್ತ್ರಚಿಕಿತ್ಸೆಯಾಗಿರುವ ಸುದ್ದಿ ಬಂದಿದೆ. ಗೀತಾ ಶಿವರಾಜ್ ಕುಮಾರ್ ಗೆ ಕುತ್ತಿಗೆ ಭಾಗದಲ್ಲಿ ನರದ ಸಮಸ್ಯೆಯಾಗಿದ್ದು ಈ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ಸಮಯದಿಂದ ಅವರಿಗೆ ಈ ಸಮಸ್ಯೆಯಿತ್ತು. ಆದರೆ ಶಿವಣ್ಣನ ಶಸ್ತ್ರಚಿಕಿತ್ಸೆಗಾಗಿ ತಮ್ಮ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು ಎನ್ನಲಾಗಿದೆ. ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ