ಸಿನಿಮಾವನ್ನು ಯಾವ್ಯಾವ ಹಂತದಲ್ಲಿ, ಯಾವ್ಯಾವ ಸ್ವರೂಪದಲ್ಲಿ ಪ್ರೇಕ್ಷಕರ ಸಾಮಿಪ್ಯಕ್ಕೆ ತರಬೇಕೆಂಬ ಕಲೆಯನ್ನು ಸರಿಕಟ್ಟಾಗಿಯೇ ಸಿದ್ಧಿಸಿಕೊಂಡಿರುವವರು ಗುರು ದೇಶಪಾಂಡೆ. ಈ ಹಿಂದೆ ಅವರು ನಿರ್ದೇಶನ ಮಾಡಿದ್ದ ಎಲ್ಲ ಚಿತ್ರಗಳಲ್ಲಿಯೂ ಈ ಮಾತಿಗೆ ಉದಾಹರಣೆಯಂಥ ಹಲವಾರು ವಿಚಾರಗಳು ಕಾಣ ಸಿಗುತ್ತವೆ.
ಗುರು ದೇಶಪಾಂಡೆ ತಾವು ನಿರ್ದೇಶಕನ ಮಾಡಿರುವ ಸಿನಿಮಾಗಳಲ್ಲಿ ಪಾಡುಗಳನ್ನು ವಿಶಿಷ್ಟವಾಗಿಯೇ ರೂಪಿಸುವತ್ತ ವಿಶೇಷವಾದ ಮುತುವರ್ಜಿ ವಹಿಸುತ್ತಾ ಬಂದಿದ್ದಾರೆ. ಇದೀಗ ಅದನ್ನು ತಾನು ನಿರ್ಮಾಣ ಮಾಡುವ ಸಿನಿಮಾಗಳಿಗೂ ವಿಸ್ತರಿಸಿದ್ದಾರೆ. ಅದರ ಫಲವೆಂಬಂತೆ ಜಂಟಲ್ ಮನ್ ಚಿತ್ರದ `ನಡುಗುತಿದೆ ಎದೆಗೂಡು ಸುಡುಗಾಡು ಬರಿ ಮೌನ. ತೆವಳುತಿದೆ ವಾತ್ಸಲ್ಯ ಬರಿ ಮೋಸ ದ್ವೇಷ ಇದೇ ಜಮಾನ’ ಎಂಬ ಹಾಡು ರೂಪುಗೊಂಡಿದೆ. ಧನಂಜಯ್ ಬರೆದಿರುವ ಈ ಹಾಡು ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ, ಬೇಸ್ ವಾಯ್ಸ್ ಖ್ಯಾತಿಯ ವಸಿಷ್ಟ ಸಿಂಹ ಅವರ ಧ್ವನಿಯಲ್ಲಿ ಮೂಡಿ ಬಂದಿದೆ.
ಈ ಲಿರಿಕಲ್ ವಿಡಿಯೋ ಸಾಂಗ್ ಮೂಲಕ ನಾಯಕ ಪ್ರಜ್ವಲ್ ದೇವರಾಜ್ ಅವರ ಒಂದಷ್ಟು ಲುಕ್ಕುಗಳನ್ನೂ ಕೂಡಾ ಚಿತ್ರತಂಡ ಅನಾವರಣಗೊಳಿಸಿದೆ. ಇದರ ಜೊತೆ ಜೊತೆಗೇ ಕಥೆಯ ಬಗೆಗಿನ ಒಂದಷು ಕುತೂಹಲಕರ ವಿಚಾರಗಳೂ ಜಾಹೀರಾಗಿವೆ. ಈ ಮೂಲಕ ನಿರ್ದೇಶಕÀ್ಜಡೇಶ್ ಕುಮಾರ್ ಹಂಪಿ ಅವರ ಶ್ರಮ ಸಾರ್ಥಕಗೊಂಡಂತಾಗಿದೆ. ಒಂದಷ್ಟು ಒಳ್ಳೆ ಕಥೆಗಳ ಮೂಲಕ ಹೊಸಬರನ್ನು ಪರಿಚಯಿಸ ಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೇ ಅವರು ಜಿ ಸಿನಿಮಾಸ್ ಬ್ಯಾನರನ್ನು ಆರಂಭಿಸಿದ್ದಾರೆ. ಅದರ ಭಾಗವಾಗಿ ಜಡೇಶ್ ಕುಮಾರ್ ಹಂಪಿ ವಿಶಿಷ್ಟವಾದ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಎಲ್ಲ ಕೆಲಸ ಕಾರ್ಯಗಳನ್ನು ಪೂರೈಸಿಕೊಂಡಿರೋ ಜಂಟಲ್ ಮನ್ ಮುಂದಿನ ವರ್ಷದ ಮೊದಲ ಭಾಗದಲ್ಲಿಯೇ ಬಿಡುಗಡೆಗೊಳ್ಳಲಿದೆ.