ಶುರುವಾದಾಗಿನಿಂದ ಸುದ್ದಿಮಾಡ್ತಿರೋ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲ್ ಮ್ಯಾನ್' ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗ್ತಿದೆ. ಟ್ರೈಲರ್ ಮತ್ತು ಹಾಡುಗಳಿಂದ ಸದ್ದು ಮಾಡ್ತಿರುವ ಜಂಟಲ್ ಮ್ಯಾನ್ ಫೆಬ್ರವರಿ 7 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ರಿಲೀಸ್ ಡೇಟ್ ಹತ್ತಿರವಾಗ್ತಿದಂತೆ ಚಿತ್ರದ ಕ್ಯೂರಿಯಾಸಿಟಿನ. ಹೆಚ್ಚಿಸಲು ತಂಡ ಬ್ಯುಸಿಯಾಗಿದೆ.ಈ ಸಲುವಾಗೇ ಚಿತ್ರದ ಮತ್ತೊಂದು ಬ್ಯೂಟಿಫುಲ್ ಲಿರಿಕಲ್ ವೀಡಿಯೋವನ್ನ ನಾಳೆ ರಿಲೀಸ್ ಮಾಡೋಕೆ ಜಂಟಲ್ ಮನ್ ತಂಡ ರೆಡಿಮಾಡ್ಕೊಂಡಿದೆ.
ಥ್ರಿಲ್ಲಿಂಗ್ ಕಥಾಹಂದರವನ್ನು ಹೊತ್ತ ಕುಂಭಕರ್ಣನ ಸ್ಟೋರಿ ಜಂಟಲ್ ಮ್ಯಾನ್ ದೇವರಾಜ್ ಪುತ್ರನಿಗೆ ಹೊಸ ಇಮೇಜ್ ನೀಡಬಹುದು ಎಂಬ ಟಾಕ್ ಸಹ ಜೋರಾಗೇ ಕೇಳಿಬರ್ತಿದೆ.' ಗಣರಾಜ್ಯೋತ್ಸವದ ದಿನ ಎದ್ದೇಳು ಭಾರತೀಯ ಅನ್ನೋ ಹಾಡಿನ ಟೀಸರ್ ಜಲಕ್ ತೋರಿಸಿದ್ದ ತಂಡ ನಾಳೆ ಅದರ ಲಿರಿಕಲ್ ವೀಡಿಯೋ ವನ್ನ ರಿಲೀಸ್ ಮಾಡಲಿದೆ. ಈ ಮೂಲಕ ಮಲಗಿರುವವರನ್ನ ಎಚ್ಚರಿಸಲು ಬರುತ್ತಿದೆ ಯೋಗರಾಜ್ ಭಟ್ ಬರೆದಿರುವ ,ಅಂಟೋನಿದಾಸ್ ಹಾಡಿರುವ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಜಂಟಲ್ ಮನ್ ಚಿತ್ರದಲಿರಿಕಲ್ ಸಾಂಗ್ . ಈ ಹಿಂದೆ ಟಗರು ಬಂತು ಟಗರು ಹಾಗೂ ಸೂರಿ ಅಣ್ಣಾ ಅಂಥಹ ಹಿಟ್ ಹಾಡು ಕೊಟ್ಟಿರೋ ಆಂಟೋನಿದಾಸ್ ಈ ಹಾಡನ್ನೂ ಹಾಡಿರೋದು ವಿಶೇಷ.
ಅಂದ್ಹಾಗೆ, ಈ ಚಿತ್ರವು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಸುತ್ತ ಈ ಕಥೆ ನಡೆಯಲಿದ್ದು ,18 ಗಂಟೆ ನಿದ್ದೆ ಮಾಡುವುದು ಹಾಗೂ 6 ಗಂಟೆ ಮಾತ್ರ ಎಚ್ಚರ ಆಗಿರುವ ನಾಯಕನ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎಂಬುದು ರೋಚಕತೆ ಹುಟ್ಟುಹಾಕಿದೆ.
ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದ್ದು, ಮುರಳಿ ಮಾಸ್ಟರ್ ಮತ್ತು ಗುಂಗುಮ್ ರಾಜು ಅವರ ನೃತ್ಯ ಸಂಯೋಜನೆ ಒಳಗೊಂಡಿದೆ.
ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಧನಂಜಯ್, ಕಿನ್ನಲ್ ರಾಜ್ ಅವರ ಸಾಹಿತ್ಯವಿದ್ದು, ಸಂಚಿತ್ ಹೆಗ್ಡೆ, ವಿಜಯ್ ಪ್ರಕಾಶ್, ವಸಿಷ್ಠ ಸಿಂಹ ಅವರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ. ಪ್ರಜ್ವಲ್ ನಟನೆಯ ನಿರೀಕ್ಷೆಯ ಚಿತ್ರಗಳಲ್ಲಿ ಜಂಟಲ್ ಮ್ಯಾನ್ ಪ್ರಮುಖವಾಗಿದ್ದು, ಸಿನ್ಮಾ ರಿಲೀಸ್ ಆಗೋ ತನಕ ಇವರೆಗೂ ಬಿಟ್ಟಿರೋ ಚಿತ್ರದ ಜಲಕ್ ನ ನೋಡಿ ಎಂಜಾಯ್ ಮಾಡಿ ಜಂಟಲ್ ಅಗಿನೇ ಹೇಳ್ತಿದೆ ಜಂಟಲ್ ಮನ್ ಚಿತ್ರತಂಡ.