Gold Smuggling Case: ವಶದಲ್ಲಿದ್ದ ನಟಿ ರನ್ಯಾ ರಾವ್ ಪತಿಗೆ ತಾತ್ಕಾಲಿಕ ರಿಲೀಫ್‌

Sampriya

ಮಂಗಳವಾರ, 11 ಮಾರ್ಚ್ 2025 (18:19 IST)
Photo Courtesy X
ಬೆಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನಸಾಗಣೆ ಮಾಡಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಅವರ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ರನ್ಯಾ ರಾವ್ ಅವರ ಪತಿ ಜತಿನ್ ಹುಕ್ಕೇರಿಗೆ ತಾತ್ಕಾಲಿಕವಾಗಿ ಬಂಧನದಿಂದ ರಿಲೀಫ್ ಸಿಕ್ಕಿದೆ.

ಬಂಧನದ ಭೀತಿಯಿಂದ ರನ್ಯಾ ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ ಮೆಟ್ಟಿಲೇರಿದ್ದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ  ಇಂದು (ಮಾರ್ಚ್​ 11) ಮಹತ್ವದ ಆದೇಶ ನೀಡಿದೆ.

ರನ್ಯಾ ಮೇಲಿರುವ ಆರೋಪಕ್ಕೂ ಜತಿನ್‌ಗೂ ಯಾವುದೇ ಸಂಬಂಧವಿಲ್ಲ. ಡಿಆರ್​ಐ ಅಧಿಕಾರಿಗಳು ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ. ಎರಡನೇ ಬಾರಿಯೂ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನ ಪಾಲಿಸದೇ ಬಂಧಿಸುವ ಸಾಧ್ಯತೆ ಎಂದು ವಾದ ಮಂಡಿಸಿದರು.

ಇನ್ನು ಈ ವಾದ ಆಲಿಸಿದ ಹೈಕೋರ್ಟ್, ಕಾನೂನಿನ ಪ್ರಕ್ರಿಯೆ ಪಾಲಿಸದೇ ಜತಿನ್​ ಅವರನ್ನು ಬಂಧಿಸದಂತೆ ಆದೇಶ ಹೊರಡಿಸಿದೆ. ಇದರಿಂದ ರನ್ಯಾ ರಾವ್ ಪತಿಗೆ ಜತಿನ್‌ಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ