ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ಆರೋಪಿ ರನ್ಯಾ ರಾವ್ ಜೊತೆ ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರಿಗೆ ನಂಟಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯೇಂದ್ರಗೂ ಏನೋ ದುಬೈ ನಂಟಿದ್ಯಂತಲ್ಲಪ್ಪಾ ಎಂದು ಟಾಂಗ್ ಕೊಟ್ಟಿದ್ದಾರೆ.
ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್ ಬಂಧನದ ವೇಳೆ ಸಚಿವರೊಬ್ಬರಿಗೆ ಕರೆ ಮಾಡಲು ಯತ್ನಿಸಿದ್ದಳು ಎಂಬ ಮಾಹಿತಿಯಿದೆ. ಈ ಕಾರಣಕ್ಕೆ ಆಕೆಗೆ ಹಾಲಿ ಸರ್ಕಾರದ ಸಚಿವರ ಜೊತೆಗೆ ನಂಟಿದೆ ಎಂದು ಬಿಜೆಪಿ ಬಲವಾದ ಆರೋಪ ಮಾಡಿದೆ.
ಇದರ ಬಗ್ಗೆ ಬಿವೈ ವಿಜಯೇಂದ್ರ ಟ್ವೀಟ್ ಮೂಲಕ ಆರೋಪ ಮಾಡಿದ್ದಾರೆ. ಇದಕ್ಕೆ ಇಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿಜಯೇಂದ್ರಗೂ ಏನೋ ದುಬೈ ನಂಟಿದ್ಯಂತಲ್ಲಾ ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿಯವರು ಸುಮ್ಮನೇ ಆರೋಪ ಮಾಡುವುದಲ್ಲ. ಒಂದು ವೇಳೆ ನಮ್ಮ ಸಚಿವರ ಜೊತೆ ನಂಟಿದ್ದರೆ ಅದಕ್ಕೆ ದಾಖಲೆ ಕೊಡಲಿ. ಪೊಲೀಸರು, ಇಲ್ಲವೇ ಅವರದ್ದೇ ತನಿಖಾ ಸಂಸ್ಥೆ ಸಿಬಿಐ ಇದ್ಯಲ್ವಾ? ತನಿಖೆ ಮಾಡಿದರೆ ಸತ್ಯ ಗೊತ್ತಾಗುತ್ತದೆ. ಅದು ಬಿಟ್ಟು ಸುಮ್ಮನೇ ಆರೋಪ ಮಾಡುವುದಲ್ಲ ಎಂದಿದ್ದಾರೆ.