ಬಿಗ್ ಬಾಸ್ ನಿಂದ ಹೊರಬಂದಿದ್ದಕ್ಕೆ ಲೈವ್ ಬಂದು ಕಾರಣ ಬಿಚ್ಚಿಟ್ಟ ಗೋಲ್ಡ್ ಸುರೇಶ್

Krishnaveni K

ಗುರುವಾರ, 19 ಡಿಸೆಂಬರ್ 2024 (13:43 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣವೇನೆಂದು ಗೋಲ್ಡ್ ಸುರೇಶ್ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ.

ಈ ವಾರ ಮಧ್ಯದಲ್ಲೇ ಗೋಲ್ಡ್ ಸುರೇಶ್ ತುರ್ತು ಕಾರಣಗಳಿಂದಾಗಿ ಮನೆಯಿಂದ ಹೊರಬಂದಿದ್ದರು. ನಿಮ್ಮ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬಕ್ಕೆ ಹೆಚ್ಚಿದೆ ಎಂದು ಬಿಗ್ ಬಾಸ್ ಹೊರಹೋಗಲು ಸೂಚಿಸಿದಾಗ ಎಲ್ಲರೂ ಅಚ್ಚರಿಪಟ್ಟಿದ್ದರು.

ಜೊತೆಗೆ ಅವರ ತಂದೆ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಅವರ ತಂದೆಯೇ ಸೋಷಿಯಲ್ ಮೀಡಿಯಾ ಮುಖಾಂತರ ನನಗೆ ಏನೂ ಆಗಿಲ್ಲ, ನಾನು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಕುಟುಂಬದವರಿಗ ಯಾರಿಗೂ ಏನೂ ಆಗಿಲ್ಲ ಎಂದು ಅವರು ಹೇಳಿದಾಗ ಹಾಗಿದ್ದರೆ ಸುರೇಶ್ ರನ್ನು ಯಾವ ಕಾರಣಕ್ಕೆ ಹೊರಕಳುಹಿಸಲಾಯಿತು ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು.

ಈಗ ಆ ಎಲ್ಲಾ ಅನುಮಾನಗಳಿಗೆ ಸ್ವತಃ ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ‘ನಾನು ಯಾಕೆ ಬಿಗ್ ಬಾಸ್ ನಿಂದ ಹೊರಬಂದೆ ಎಂಬ ಅನುಮಾನ ನಿಮಗೆಲ್ಲರಿಗೂ ಇದೆ ಎಂದು ನನಗೆ ಗೊತ್ತು. ಅದನ್ನು ಪರಿಹರಿಸಲೆಂದೇ ನಾನು ಇಂದು ಲೈವ್ ಬಂದಿದ್ದೇನೆ. ನನಗೆ ಬಿಗ್ ಬಾಸ್ ನಿಂದ ಶೋಗೆ ಬರಲು ಆಹ್ವಾನ ಸಿಕ್ಕಿದಾಗ ನಿಜಕ್ಕೂ ಖುಷಿಯಾಗಿತ್ತು. ನಾನು ಬಿಗ್ ಬಾಸ್ ಮನೆಗೆ ಬರುವ ಮೊದಲು ನನ್ನದೇ ಕೆಲವು ಬ್ಯುಸಿನೆಸ್ ಹೊಂದಿದ್ದೆ. ಅದನ್ನು ನಾನೇ ನಡೆಸುತ್ತಿದ್ದೆ. ಇಲ್ಲಿಗೆ ಬರುವಾಗ ನನ್ನ ವ್ಯವಹಾರಗಳನ್ನು ಪತ್ನಿಗೆ ವಹಿಸಿ ಬಂದೆ. ಆದರೆ ಕೆಲವೊಂದು ಕೆಲಸವನ್ನು ಇನ್ನೊಬ್ಬರಿಗೆ ವಹಿಸಿದರೂ ಒಂದು ಹಂತದಲ್ಲಿ ಅದನ್ನು ನಿಭಾಯಿಸಲಾಗದೇ ಒತ್ತಡವಾಗುತ್ತದೆ. ನನ್ನ ಪತ್ನಿಗೂ ಅದೇ ಆಗಿದೆ. ಆಕೆಗೆ ಅದನ್ನು ನಿಭಾಯಿಸಲು ಕಷ್ಟವಾಯಿತು ಎಂದು ನನಗೆ ಬರಲು ಹೇಳಿದ್ದರು. ಅದಕ್ಕೇ ಹೊರಬಂದೆ. ಈಗ ಎಲ್ಲಾ ಸಮಸ್ಯೆಗಳೂ ಸರಿ ಹೋಗಿದೆ. ಜೊತೆಗೆ ನನಗೆ ಆರೋಗ್ಯವೂ ಸರಿಯಿರಲಿಲ್ಲ. ಈಗ ಸುಧಾರಿಸಿಕೊಂಡಿದ್ದೇನೆ. ಬಿಗ್ ಬಾಸ್ ಮನೆಯವರನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗಲೂ ಇನ್ನೊಂದು ಅವಕಾಶ ಕೊಟ್ಟರೆ ಬಿಗ್ ಬಾಸ್ ಗೆ ಮರಳಲು ಇಷ್ಟಪಡುತ್ತೇನೆ’ ಎಂದು ಸುರೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ