ಗಾಳಿಪಟ 2 ಡಬ್ಬಿಂಗ್ ಮುಗಿಸಿದ ಗಣೇಶ್: ಇನ್ನೇನು ಬಿಡುಗಡೆಯೇ ಬಾಕಿ
ಗಾಳಿಪಟ 2 ಸಿನಿಮಾ ಶುರು ಮಾಡಿ ಮೂರು ವರ್ಷವೇ ಆಗುತ್ತಾ ಬಂದಿದೆ. ಆದರೆ ಕೊರೋನಾ ಕಾರಣದಿಂದ ಇಷ್ಟು ದಿನ ತಡವಾಗಿದೆ. ಇದೀಗ ನಾಯಕ ಗಣೇಶ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ.
ಸದ್ಯದಲ್ಲೇ ಚಿತ್ರತಂಡ ರಿಲೀಸ್ ನತ್ತ ಹೆಜ್ಜೆ ಹಾಕಲಿದೆ. ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.