ನೀ ಬಳಿಯಿದ್ದರೆ ಮಾತ್ರ ಜಗತ್ತು ಸುಂದರ: ರಾಧಿಕಾಗೆ ಯಶ್ ಪ್ರೇಮ ಸಂದೇಶ
ಮೊದಲು ರಾಧಿಕಾ ಸರದಿ. ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪ್ರಕಟಿಸಿದ್ದ ರಾಧಿಕಾ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಹೇಳಿದ್ದಾರೆ.
ಇದಾದ ಬಳಿಕ ಯಶ್ ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಜೊತೆಗಿನ ಫೋಟೋ ಜೊತೆಗೆ ಸಂದೇಶ ಬರೆದಿದ್ದು, ನೀನು ಜೊತೆಗಿದ್ದರೆ ಮಾತ್ರ ನನಗೆ ಜಗತ್ತು ಸುಂದರವಾಗಿರುತ್ತದೆ. ಎಂದೆಂದಿಗೂ ಪ್ರೀತಿಸುವೆ ಎಂದು ಬರೆದುಕೊಂಡಿದ್ದಾರೆ. ಇನ್ನು, ರಾಕಿಂಗ್ ಜೋಡಿಗೆ ನೆಟ್ಟಿಗರು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.