ಹುಟ್ಟುಹಬ್ಬಕ್ಕೆ ಮನೆ ಹತ್ರ ಬರ್ಬೇಡಿ ಎಂದ ಗೋಲ್ಡನ್ ಸ್ಟಾರ್ ಗಣೇಶ್
ಗಣೇಶ್ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಲ್ಲ. ಈ ಬಾರಿಯೂ ಅಭಿಮಾನಿಗಳಿಗೆ ಬರ್ತ್ ಡೇ ದಿನ ಮನೆಗೆ ಬರಬೇಡಿ ಎಂದಿದ್ದಾರೆ ಗಣೇಶ್.
ನನ್ನ ಹುಟ್ಟುಹಬ್ಬವನ್ನು ನಿಮ್ಮ ಹುಟ್ಟುಹಬ್ಬದಂತೆ ಆಚರಿಸುವ ನಿಮ್ಮ ಅಭಿಮಾನಕ್ಕೆ ಚಿರ ಋಣಿ. ಹುಟ್ಟುಹಬ್ಬದ ನೆಪದಲ್ಲಾದರೂ ನಿಮ್ಮೆಲ್ಲರನ್ನು ಭೇಟಿ ಮಾಡಿ ಸಂಭ್ರಮಿಸುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಹುಟ್ಟುಹಬ್ಬದ ದಿನ ಕಾರಣಾಂತರಗಳಿಂದ ನಾನು ಮನೆಯಲ್ಲಿರಲ್ಲ. ಹೀಗಾಗಿ ಯಾರೂ ದಯವಿಟ್ಟು ಮನೆ ಹತ್ರ ಬರಬೇಡಿ. ನನಗಾಗಿ ತರುವ ಕೇಕ್, ಹಾರ, ತುರಾಯಿ ಖರ್ಚನ್ನು ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ನೆರವು ನೀಡಿ ಎಂದು ಗಣೇಶ್ ಮನವಿ ಮಾಡಿದ್ದಾರೆ.