ಶುಭ ಸುದ್ದಿ! ಶಕ್ತಿಮಾನ್ ಭಾರತೀಯ ಟಿವಿಯಲ್ಲಿ ಕಮ್‌ಬ್ಯಾಕ್

ಶುಕ್ರವಾರ, 6 ಮೇ 2016 (17:37 IST)
ಶಕ್ತಿಮಾನ್ ಅಭಿಮಾನಿಗಳಿಗೊಂದು ಸಂತೋಷದ ಸುದ್ದಿ ಬಂದಿದ್ದು, ಭಾರತೀಯ ಸೂಪರ್ ಹೀರೊ ಶಕ್ತಿಮಾನ್ ಕಿರುತೆರೆಯ ಮೇಲೆ ಮತ್ತೆ ವಿಜೃಂಭಿಸಲಿದ್ದಾನೆ.   ನಟ ಮುಖೇಶ್ ಖನ್ನಾ ಈ ಶೋಗೆ ಪುನಶ್ಚೇತನ ನೀಡಿ ವಿವಿಧ ಚಾನೆಲ್‌‍ಗಳಲ್ಲಿ ಪ್ರದರ್ಶಿಸಲು ಅವುಗಳ ಜತೆ ಮಾತುಕತೆ ನಡೆಸಿದ್ದಾರೆ. ನಟ ಮುಖೇಶ್ ಖನ್ನಾ ತಮ್ಮ ಮೈತೂಕವನ್ನು 8 ಕೆಜಿ ಇಳಿಸಿಕೊಂಡಿದ್ದು,  15 ವರ್ಷಗಳ ಹಿಂದೆ ಇದ್ದ ಮೈಕಟ್ಟಿಗೆ ಸಮನಾಗಿ ಹೊಂದಿಕೆಯಾಗಲು ನಾನು ಬಯಸಿದ್ದೇನೆ ಎಂದು ಹೇಳಿದರು. 
 
 ಖನ್ನಾ ಪಾತ್ರದ ಶಕ್ತಿಮಾನ್ ಮನೆ, ಮನೆ ಮಾತಾಗಿತ್ತು. ಶಕ್ತಿಮಾನ್ ಪಾತ್ರದ ಜತೆ ತಮ್ಮನ್ನು ಜನರು ನಂಟು ಕಲ್ಪಿಸುವುದರಿಂದ ಬೇರಾರಿಗೂ ಆ ಪಾತ್ರ ನೀಡಲು ಸಾಧ್ಯವಾಗುವುದಿಲ್ಲ ಎಂದರು. 
 
 ನಾನು ಮಹಾಭಾರತದಲ್ಲಿ ಭೀಷ್ಮಪಿತಾಮಹ ಪಾತ್ರ ಮಾಡಿದಾಗ ಯುವಕನಾಗಿದ್ದೆ. ನಟನನ್ನು ವಯಸ್ಸಿನ ಕಾರಣದಿಂದ ನಿರ್ಬಂಧಿಸಬಾರದು ಎಂದು ಖನ್ನಾ ಹೇಳಿದರು.  ಮುಖೇಶ್ ಖನ್ನಾ ಅವರ  ಶಕ್ತಿಮಾನ್ ಪಾತ್ರದ ಎರಡನೇ ಇನ್ನಿಂಗ್ಸ್‌ನಿಂದ  ನಮ್ಮ ಬಾಲ್ಯವು ಯಾವುದೇ ಮಾರ್ಪಾಟಿಲ್ಲದೇ ವಾಪಸು ಬಂದಂತೆ ಕಾಣುತ್ತದೆ. ನಮ್ಮ ನೆಚ್ಚಿನ ಖಳನಾಯಕ ಕಿಲ್ವಿಶ್ ಅವರ ಜತೆ ವಾಪಸಾಗುತ್ತಾನೆಯೇ ಕಾದು ನೋಡಬೇಕು. 

ವೆಬ್ದುನಿಯಾವನ್ನು ಓದಿ