ಹರಿಪ್ರಿಯಾ ‘ಕನ್ನಡ್ ಗೊತ್ತಿಲ್ಲ’ ಟೀಸರ್ ಆಗಸ್ಟ್ 6 ಕ್ಕೆ

ಭಾನುವಾರ, 4 ಆಗಸ್ಟ್ 2019 (08:30 IST)
ಬೆಂಗಳೂರು: ನಟಿ ಹರಿಪ್ರಿಯಾ, ಸುಧಾರಾಣಿ ಪ್ರಮುಖ ಪಾತ್ರದಲ್ಲಿರುವ ಕನ್ನಡ್ ಗೊತ್ತಿಲ್ಲ ಎನ್ನುವ ಸಿನಿಮಾದ ಟೀಸರ್ ಆಗಸ್ಟ್ 6 ಕ್ಕೆ ಬಿಡುಗಡೆಯಾಗಲಿದೆ.


ಈಗಾಗಲೇ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಕನ್ನಡ್ ಗೊತ್ತಿಲ್ಲ. ಈ ಸಿನಿಮಾದ ಕತೆ ಏನಿರಬಹುದು ಎಂಬ ಸುಳಿವು ಟೀಸರ್ ಮೂಲಕ ತಿಳಿಯಲಿದೆ.

ಖ್ಯಾತ ನಿರ್ದೇಶಕ ಸಂತೋಷ್‍ ಆನಂದ್ ರಾಮ್ ಚಿತ್ರದ ಟೀಸರ್ ನ್ನು ಸಂಜೆ 6 ಕ್ಕೆ ಪಿಆರ್ ಕೆ ಅಡಿಯೋ ಯೂ ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ