ಮನೆಯಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಮದುವೆ ಬಗ್ಗೆ ಚಮಕ್ ಕೊಟ್ಟ ಹರಿಪ್ರಿಯಾ

ಸೋಮವಾರ, 6 ಏಪ್ರಿಲ್ 2020 (09:34 IST)
ಬೆಂಗಳೂರು: ನಟಿ ಹರಿಪ್ರಿಯಾ ಮದುವೆ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇದರಿಂದ ಬೇಸತ್ತು ಒಮ್ಮೆ ಸ್ವತಃ ಹರಿಪ್ರಿಯಾ ಸ್ಪಷ್ಟನೆಯನ್ನೂ ನೀಡಿದ್ದರು. ಆದರೆ ಇದೀಗ ಅವರೇ ಮದುವೆ ಬಗ್ಗೆ ಗುಲ್ಲು ಹಬ್ಬಲು ಕಾರಣವಾಗಿದ್ದಾರೆ.


ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇರುವ ಹರಿಪ್ರಿಯಾ ಬಿಡುವಿನ ದಿನಗಳಲ್ಲಿ ತಮ್ಮದೇ ಬ್ಲಾಗ್ ನಲ್ಲಿ  ತಮಗನಿಸಿದ ಬರಹ ಬರೆಯುತ್ತಿದ್ದಾರೆ. ನಿನ್ನೆ ಅವರು ತಮ್ಮ ಬರಹಕ್ಕೆ ನೀಡಿದ ಶೀರ್ಷಿಕೆ ನೋಡಿ ಎಲ್ಲರೂ ಹರಿಪ್ರಿಯಾ ಮದುವೆ ಬಗ್ಗೆ ಹೇಳುತ್ತಿದ್ದಾರೆ ಎಂದುಕೊಂಡರು.

ಮನೆಯಲ್ಲಿ ಕೊಡು ಕೊಳ್ಳುವಿಕೆ ಮಾತುಕತೆ ನಡೆಯುತ್ತಿದೆ. ನಿಮ್ಮ ಆಶೀರ್ವಾದವಿರಲಿ ಎಂದು ಹರಿಪ್ರಿಯಾ ಸಂದೇಶ ಬರೆದಿದ್ದು ನೋಡಿ ಸ್ಯಾಂಡಲ್ ವುಡ್ ನ ಚೆಲುವು ಮದುವೆ ಮಾತುಕತೆ ಬಗ್ಗೆ ಹೇಳುತ್ತಿರಬೇಕು ಎಂದು ಕುತೂಹಲದಿಂದ ಬ್ಲಾಗ್ ತೆರೆದು ನೋಡಿದ್ದಾರೆ.

ಆದರೆ ಅಭಿಮಾನಿಗಳಿಗೆ ಚಮಕ್ ಕೊಟ್ಟ ಹರಿಪ್ರಿಯಾ ನೀವೆಲ್ಲರೂ ನಾನು ಮದುವೆ ಬಗ್ಗೆ ಮಾತನಾಡುತ್ತಿದ್ದೇನೆ ಎಂದುಕೊಂಡಿರಬಹುದು. ಆದರೆ ನಾನು ಮದುವೆ ಬಗ್ಗೆ ಹೇಳಿಲ್ಲ. ಲಾಕ್ ಡೌನ್ ಸಮಯದಲ್ಲಿ ಅಕ್ಕ ಪಕ್ಕದವರ ಜತೆ ತರಕಾರಿ ಹಣ್ಣು, ಅಗತ್ಯ ವಸ್ತುಗಳನ್ನು ಕೊಟ್ಟು ಪಡೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದೆನಷ್ಟೇ ಎಂದು ಚಮಕ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ